Wednesday 18 April 2018

ವಿದ್ಯಾಾರ್ಥಿಗಳ ಪಾಲಿನ ಅಮ್ಮ
ಅನಿತಾ ಮೇರಿ



ನಮ್ಮ ಜೀವನದ ಪ್ರಮುಖ ಉದ್ದೇಶವೇ ಮಾನವ ಸೇವೆ. ಇದು ದಲಾಯಿ ಲಾಮಾ ಅವರ ಉಕ್ತಿಿ. ನಾವು ಇತರರಿಗೆ ಅಥವಾ ಜಗತ್ತಿಿಗೆ ಏನನ್ನು ಕೊಡುತ್ತೇವೆಯೋ ಅದು ಅಮರವಾಗಿ ನಮ್ಮ ಹೆಸರನ್ನು ಬೆಳಗಿಸುತ್ತದೆ. 
  ಜೀವನದಲ್ಲಿ ಆರೋಗ್ಯ ಮತ್ತು ಶಿಕ್ಷಣ ಎರಡೂ ಅವಶ್ಯ. ಅವಿನಾಭಾವ ಸಂಬಂಧವನ್ನು ಇವು ಹೊಂದಿವೆ. ಚಿಕಿತ್ಸೆೆ ಸಿಗದೆ ಅಥವಾ ಆರ್ಥಿಕ ನೆರವಿಲ್ಲದೆ ಎಷ್ಟೋೋ ಮಕ್ಕಳು ಚಿಕಿತ್ಸೆೆ ಪಡೆಯದೆ ಕಮರುವುದೂ ಇದೆ. ಇಂತಹ ಮಕ್ಕಳ ರಕ್ಷಣೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡವರೆಂದರೆ ಶಿಕ್ಷಕಿ ಅನಿತಾ ಮೇರಿ. ಸೇವೆಯಲ್ಲಿ ಜೀವನದ ಸಾರ್ಥಕತೆಯನ್ನು ಕಾಣು ಎನ್ನುವುದು ಇವರ ಮಂತ್ರ. 
ಪ್ರಸ್ತುತ ಭದ್ರಾಾವತಿ ತಾಲೂಕು ಹುಣಸೆಕಟ್ಟೆೆ ಪ್ರಾಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿಿರುವ ಅನಿತಾ, ಈವರೆಗೆ 315 ಮಕ್ಕಳಿಗೆ ಉನ್ನತ ಮಟ್ಟದ ಚಿಕಿತ್ಸೆೆಯನ್ನು ಉಚಿತವಾಗಿ ಕೊಡಿಸಿದ್ದಾಾರೆ. ಶಿಕ್ಷಣ ಇಲಾಖೆಯಲ್ಲಿ ಮಕ್ಕಳಿಗೆ ಇರುವ ಸುವರ್ಣ ಆರೋಗ್ಯ ಚೈತನ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆೆ ನೆರವಾಗುತ್ತಿಿದ್ದಾಾರೆ. ಮಕ್ಕಳಲ್ಲಿ ಇರುವ ಕಾಯಿಲೆಗಳನ್ನು ಅವರ ವರ್ತನೆ ಅಥವಾ ಶಿಕ್ಷಕ-ಪಾಲಕರ ಮೂಲಕ ತಿಳಿದುಕೊಂಡು ಸಂಬಂಧಿಸಿದ ದಾಖಲೆ ಸಿದ್ಧಪಡಿಸಿ ಜಿಲ್ಲಾಾ ಶಿಕ್ಷಣಾ ದಾಖಲೆ ಸಹಿತ ಪರವಾನಿಗೆ ಪಡೆದು  ಬೆಂಗಳೂರಿನ ಜಯದೇವ, ನಾರಾಯಣ ಹೃದಯಾಲಯದಲ್ಲಿ ತಮ್ಮ ಮಕ್ಕಳಂತೆಯೇ ಚಿಕಿತ್ಸೆೆ ಕೊಡಿಸುತ್ತಿಿದ್ದಾಾರೆ. ವಿಶೇಷವಾಗಿ ಹೃದ್ರೋಗಕ್ಕೆೆ ಸಂಬಂಧಿಸಿದ ಕೇಸುಗಳನ್ನೇ ಹೆಚ್ಚಾಾಗಿ ನಿರ್ವಹಿಸಿದ್ದಾಾರೆ. ಇದ್ಯಾಾವುದಕ್ಕೂ ಬಿಡಿಗಾಸನ್ನು ಯಾರಿಂದಲೂ ಪಡೆದಿಲ್ಲ ಎನ್ನುವುದನ್ನು ಹೇಳಲೇಬೇಕು.
  ಈಗ ಶಿಕ್ಷಕರೇ ಮಕ್ಕಳಲ್ಲಿರುವ ಕಾಯಿಲೆ ಅರಿತು  ಅನಿತಾ ಅವರಿಗೆ ತಿಳಿಸಿಬಿಡುತ್ತಾಾರೆ. ಪಾಲಕರಿಗೆ ಆರೋಗ್ಯ ಚೈತನ್ಯ ಯೋಜನೆಯ ಅರಿವಿರದಿರುವುದರಿಂದ ತಾವೇ ಮುಂದಾಗಿ ಎಲ್ಲವನ್ನೂ ನಿರ್ವಹಿಸುತ್ತಿಿದ್ದಾಾರೆ. ಮಕ್ಕಳಿಗೆ ಕೇವಲ ಪಾಠ ಮಾಡುವುದಷ್ಟೇ ಶಿಕ್ಷಕನ ಕೆಲಸವಲ್ಲ. ಆತನ ಸರ್ವಾಂಗೀಣ ಬೆಳವಣಿಗೆಯತ್ತ ಗಮನಹರಿಸಬೇಕಾದದ್ದೂ ಜವಾಬ್ದಾಾರಿ. ಇದನ್ನರಿತು ಸದಾ ಹೆಜ್ಜೆೆ ಇಡುವ ಅನಿತಾ, ಮಕ್ಕಳ ಪಾಲಿಗೆ ಶಿಕ್ಷಕಿಯಾಗಿ ಉಳಿಯದೆ ‘ಅಮ್ಮ’ ಆಗಿದ್ದಾಾರೆ.
ಒಂದೇ ವರ್ಷದ ಅಂತರದಲ್ಲಿ ಎರಡು ಬಾರಿ ಅನಿತಾ ಹೃದಯ ಶಸ್ತ್ರಚಿಕಿತ್ಸೆೆಗೆ ಒಳಗಾಗಿದ್ದರೂ, ತಮ್ಮ ಆರೋಗ್ಯವನ್ನು ಲಕ್ಷಿಸದೆ, ವೈದ್ಯರ ಸೂಚನೆಯನ್ನು ಮೀರಿ ಕೆಲಸ ಮಾಡುತ್ತಿಿದ್ದಾಾರೆ. ಶಿವಮೊಗ್ಗ ಸಹಿತ ಚಿಕ್ಕಮಗಳೂರು, ಹಾಸನ ಜಿಲ್ಲೆೆಯಿಂದ ನೂರಾರು ವಿದ್ಯಾಾರ್ಥಿಗಳ ಆರೋಗ್ಯವನ್ನು ಅವರು ಕಾಪಾಡಿದ್ದಾಾರೆ.
ಮೂಲತಃ ತೀರ್ಥಹಳ್ಳಿಿಯವರಾದ ಅನಿತಾ, ಈಗ ಭದ್ರಾಾವತಿ ವಾಸಿಯಾಗಿದ್ದಾಾರೆ. ಅನಾರೋಗ್ಯ ಮಕ್ಕಳು ಎಲ್ಲಾಾದರೂ ಕಂಡುಬಂದಲ್ಲಿ ಕೂಡಲೇ ಮಾಹಿತಿ ಕೊಡುವಂತೆ ವಿನಂತಿ ಮಾಡುತ್ತಿಿದ್ದಾಾರೆ. (ಇವರ ದೂರವಾಣಿ ಸಂಖ್ಯೆೆ-9900700241). ಆಕಾಶವಾಣಿ ಮತ್ತು ದೂರದರ್ಶನ ಹಾಗೂ ವಿವಿಧ ಚಾನೆಲ್‌ಗಳಲ್ಲಿ, ಪತ್ರಿಿಕೆಗಳಲ್ಲಿ ಇವರ ಬಗ್ಗೆೆ ಪ್ರಸಾರ ಮತ್ತು ಪ್ರಕಟವಾವಾದ ಲೇಖನಗಳನ್ನು ಓದಿಯೇ ಹೆಚ್ಚಿಿನ ಜನರು ಸಂಪರ್ಕಿಸುತ್ತಿಿದ್ದಾಾರೆ. 
ತನಗೆ ಮನೆ ಕಟ್ಟಬೇಕೆಂಬ ಆಸೆಯಿಲ್ಲ, ಆಸ್ತಿಿ ಸಂಪಾದಿಸಬೇಕೆಂಬ ಬಯಕೆಯೂ ಇಲ್ಲ. ಇದೇ ಹಣವನ್ನು ಮಕ್ಕಳ ಆರೋಗ್ಯಕ್ಕಾಾಗಿ ಖರ್ಚು ಮಾಡುತ್ತೇನೆ. ಬಡತನದಲ್ಲಿರುವ ವಿದ್ಯಾಾರ್ಥಿಗಳಿಗೆ ಎಲ್ಲಾಾ ರೀತಿಯಲ್ಲೂ ಕೈಲಾದ ಸಹಾಯ ಮಾಡುತ್ತಿಿದ್ದೇನೆ. ದಾನಿಗಳಿಂದ, ಸಹಶಿಕ್ಷಕರಿಂದ ನೆರವು ಕೊಡಿಸುತ್ತಿಿದ್ದೇನೆ. ಶಿಕ್ಷಣ ಮತ್ತು ಆರೋಗ್ಯ ಇಲಾಖಾಧಿಕಾರಿಗಳು, ಆಸ್ಪತ್ರೆೆಯವರು ಸಹಕಾರ ನೀಡುತ್ತಿಿದ್ದಾಾರೆ ಎನ್ನುತ್ತಾಾರೆ ಅವರು. 
ಇವರ ಸೇವಾಮನೋಭಾವ ಗಮನಿಸಿ  ವಿವಿಧ ಚಾನೆಲ್‌ಗಳು ಸಂದರ್ಶನ ಪ್ರಸಾರ ಮಾಡಿವೆ. ಹತ್ತಾಾರು ಸಂಘಟನೆಗಳು ಗೌರವಿಸಿವೆ. ಎಂಎಲ್‌ಸಿ ಬಸವರಾಜ್ ಹೊರಟ್ಟಿಿ ತಮ್ಮ ತಾಯಿ ಹೆಸರಿನಲ್ಲಿ ಕೊಡಮಾಡುವ ಅವ್ವ ಪ್ರಶಸ್ತಿಿಯನ್ನು ಪ್ರದಾನ ಮಾಡಿದ್ದಾಾರೆ.
ಅನಿತಾ ಅವರ ಹೃದಯ ವೈಶಾಲ್ಯ ದೊಡ್ಡದು. ಅವರ ಸೇವಾಮನೋಭಾವಕ್ಕೆೆ ಸರಿಸಾಟಿಯೇ ಇಲ್ಲ. ಸೂಕ್ತ ಚಿಕಿತ್ಸೆೆ ಸಿಗದೆ ತನ್ನ ತಂಗಿಯಂತೆ ಯಾರೂ ಪ್ರಾಾಣ ಕಳೆದುಕೊಳ್ಳಬಾರದೆಂದು ಮಕ್ಕಳ ಚಿಕಿತ್ಸೆೆಗೆ ನಿಸ್ವಾಾರ್ಥದಿಂದ ನೆರವಾಗುತ್ತಿಿರುವುದು ಕನ್ನಡ ನಾಡಿಗೆ ಹೆಮ್ಮೆೆಯ ವಿಚಾರ.
7.4.18
.........................................

No comments:

Post a Comment