Wednesday 18 April 2018

ಗೋ ಗ್ರೀನ್, ಸೇವ್ ವಾಟರ್‌ನ
 ಸಮೀನಾ ಕೌಸರ್



ಗೋ ಗ್ರೀನ್, ಸೇವ್ ಎನ್ವಿಿರಾನ್‌ಮೆಂಟ್, ಸೇವ್ ವಾಟರ್
ಇದು ಎಲ್ಲೆೆಡೆ ಕೇಳಿಬರುತ್ತಿಿರುವ ಘೋಷವಾಕ್ಯ. ರಾಷ್ಟ್ರೀಯ ಭದ್ರತೆಯಷ್ಟೇ ಪ್ರಾಾಮುಖ್ಯ ಇಂದು ಪರಿಸರ ರಕ್ಷಣೆಗೆ ಬಂದಿದೆ. ಬಹುತೇಕ ಶಾಲಾ- ಕಾಲೇಜುಗಳು ಪರಿಸರ ಕಾರ್ಯಕ್ರಮಗಳನ್ನು ಕೇವಲ ಹೆಸರಿಗಷ್ಟೇ ನಡೆಸುತ್ತಿಿವೆ. ಇದನ್ನು ಒಂದು ಜವಾಬ್ದಾಾರಿಯುತ ಅಥವಾ ಯುವಪೀಳಿಗೆಯ ಹೊಣೆ ಎಂಬ ದೃಷ್ಟಿಿಯಲ್ಲಿ ನಡೆಸುವವರು ಬೆರಳೆಣಿಕೆಯಷ್ಟು ಮಾತ್ರ. ಆದರೆ, ನಗರದ ಬೈಪಾಸ್ ರಸ್ತೆೆಯಲ್ಲಿರುವ ಅಂಬರ್ ವ್ಯಾಾಲಿ ಶಾಲೆಯ ಮಕ್ಕಳು ಮಾತ್ರ ಇದನ್ನು ವರ್ಷವಿಡಿ ಆಚರಿಸುತ್ತ, ಒಂದು ಆಂದೋಲನದ ರೂಪ ನೀಡಿದ್ದಾಾರೆ. ಇದರ ರೂವಾರಿ ಶಾಲೆಯ ಸಂಸ್ಥಾಾಪಕಿ ಸಮೀನಾ ಕೌಸರ್.
ಪರಿಸರದದ ಬಗ್ಗೆೆ ಅಪಾರ ಕಾಳಜಿ ಹೊಂದಿರುವ ಸಮೀನಾ, ಮಕ್ಕಳಲ್ಲಿ ಈ ಬಗ್ಗೆೆ ಜಾಗೃತಿ ಮೂಡಿಸಿ, ಆ ಮೂಲಕ ಬದಲಾವಣೆ ತರಲು ಮುಂದಡಿ ಇಟ್ಟಿಿದ್ದಾಾರೆ. ಇದಕ್ಕಾಾಗಿ ಹತ್ತಾಾರು ವೈವಿಧ್ಯ ಕಾರ್ಯಕ್ರಮ ರೂಪಿಸಿದ್ದಾಾರೆ. ಶಾಲೆಯ ತುಂಬಾ ಹಸಿರಿಗೆ ಆದ್ಯತೆ ಕೊಟ್ಟಿಿದ್ದಾಾರೆ. ಬದಲಾವಣೆ ಯಾವುದಾದರೂ ಕ್ಷೇತ್ರದಲ್ಲಿ ಮೊದಲು ನಡೆಯಬೇಕೆಂದರೆ  ಅದಕ್ಕೆೆ ಜಾಗೃತಿ ಅವಶ್ಯ ಎನ್ನುವುದನ್ನು ಅರಿತಿರುವ ಅವರು, ಜಲ ಸಂರಕ್ಷಣೆ, ಪರಿಸರ ರಕ್ಷಣೆ ಮತ್ತು ಹಸಿರು ಕಾಪಾಡುವುದರ ಸಂಬಂಧ ಸದಾ ಒಂದಿಲ್ಲೊೊಂದು ಚಟುವಟಿಕೆ ನಡೆಸುತ್ತಲೇ ಇದ್ದಾಾರೆ. ವಿಶ್ವ ಪರಿಸರ ದಿನದಂದು ಸುಮಾರು 300ರಷು ಸಸಿಗಳನ್ನು ನಗರದ ವಿವಿಧ ಭಾಗಗಳಲ್ಲಿ ನೆಟ್ಟಿಿದ್ದಾಾರೆ. ಸೆಪ್ಟೆೆಂಬರ್‌ನಲ್ಲಿ ರ್ಯಾಾಲಿ ಫಾರ್ ರಿವರ್ ನಡೆಸಿದ್ದಾಾರೆ. ಇದೇ ಫೆ. 24ರಂದು ತುಂಗಾ ದಡದಲ್ಲಿ ಜಲಮೂಲ ರಕ್ಷಿಸುವ ವಿಶೇಷ ಕಾರ್ಯಕ್ರಮ ಕ್ಕೆೆ ಸಿದ್ದತೆ ನಡೆಸಿದ್ದಾಾರೆ.
ವಿವಿಧ ಶಾಲೆ, ತಾಲೂಕು, ಜಿಲ್ಲಾಾ ಮಟ್ಟದ ಶಿಕ್ಷಕರು, ಮುಖ್ಯಶಿಕ್ಷಕಕರಿಗಾಗಿ ಪರಿಸರ ಸಂಬಂಧಿತ ಸ್ಪರ್ಧೆ ನಡೆಸಿ ಅವರಲ್ಲಿಯೂ ತಮ್ಮ ಶಾಲೆಯ ಮಾದರಿಯನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡಿದ್ದಾಾರೆ. ಇದಕ್ಕೆೆ ಮನಸೋತು ಹಲವು ಶಿಕ್ಷಕರು ಪರಿಸರ ರಕ್ಷಣೆ ನಮ್ಮ ಹೊಣೆ ಎನ್ನುವಂತೆ ಹೆಜ್ಜೆೆ ಇಟ್ಟಿಿರುವುದು ಇವರ ಕಾಳಜಿಗೆ ಸಿಕ್ಕ ಒಂದು ಪ್ರತಿಫಲವಾಗಿದೆ.
ಸಮೀನಾ ಅವರು ಶಿಕ್ಷಕರು ಮತ್ತು ಮಕ್ಕಳನ್ನು ಸೇರಿಸಿಕೊಂಡು ಉತ್ಸಾಾಹದಿಂದ ಸಂಘಟಿತವಾಗಿ, ಯೋಜನಾಬದ್ಧವಾಗಿ ದೂರದೃಷ್ಟಿಿಯಿಂದ ಈ ಕೆಲಸ ಮಾಡುತ್ತಿಿದ್ದಾಾರೆ. ಸ್ವತಃ ತಾವೇ ನೇತೃತ್ವ ವಹಿಸುತ್ತಿಿರುವುದು ಇತರರಿಗೂ ಮಾರ್ಗದರ್ಶಿಯಾಗಿದೆ. ಪರಿಸರ ಕ್ಷೇತ್ರಕ್ಕೆೆ ಸಂಬಂಧಿಸಿದಂತೆ ಅವರ ಶಾಲೆಯ ಮಕ್ಕಳು ನಗರದ ಹಲವು ಬಡಾವಣೆಗಳಲ್ಲಿ ಜಾಥಾ, ಜಾಗೃತಿ, ಬೀದಿ ನಾಟಕ ಮೊದಲಾದವುಗಳನ್ನು ಪ್ರದರ್ಶಿಸಿ ಸಾರ್ವಜನಿಕ ಪ್ರಶಂಸೆಗೆ ಒಳಗಾಗಿದ್ದಾಾರೆ.
ಮಕ್ಕಳಲ್ಲಿ ಪ್ರಜ್ಞೆ ಮೂಡಿದರೆ ಮಾತ್ರ ಅದು ಹೊಸ ಬದಲಾವಣೆಗೆ ನಾಂದಿಯಾಗಲಿದೆ. ಪರಿಸರವನ್ನು ನಾವು ಮುಂದಿನ ಪೀಳಿಗೆಗೆ ಉಳಿಸುವುದು ಅನಿವಾರ್ಯವಾಗಿದೆ. ಇದು ತಮ್ಮಲ್ಲಿ ಹೊಸ ಚಿಂತನೆ ಹುಟ್ಟುಹಾಕಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವಂತೆ ಮಾಡಿದೆ. ಎಳೆವಯಸ್ಸಿಿನಲ್ಲೇ ಅದರಿಂದಾಗುವ ಲಾಭ-ನಷ್ಟಗಳ ಅರಿವಿರಬೇಕು. ಮಕ್ಕಳ ಮನಸ್ಸಿಿನಲ್ಲಿ ಅದು ನಾಟುವಂತೆ ಪ್ರಯೋಗಾತ್ಮಕವಾಗಿದ್ದರೆ ಇನ್ನಷ್ಟು ವಿಶಾಲವಾಗಿ ಅದು ಬೆಳೆಯಲು ಸಾಧ್ಯ. ಈ ನಿಟ್ಟಿಿನಲ್ಲಿ ಪರಿಸರ ಕಾಳಜಿಯನ್ನು ಬೆಳೆಸುತ್ತಿಿದ್ದೇನೆ ಎನ್ನುತ್ತಾಾರೆ ಸಮೀನಾ. 
  ಶಾಂತಿನಗರದಲ್ಲಿ ಸಹರಾ ಎಜುಕೇಶನ್ ಟ್ರಸ್‌ಟ್‌ ಸಹ ನಡೆಸುತ್ತಿಿರುವ ಇವರು, ಕೇವಲ ಪರಿಸರಾತ್ಮಕವಾಗಿ ಮಾತ್ರವಲ್ಲ, ಸಾಮಾಜಿಕ ಕಾಳಜಿಯನ್ನು ಅಷ್ಟೇ ಹೊಂದಿದ್ದಾಾರೆ. 1300 ಬಡಹೆಣ್ಣುಮಕ್ಕಳಿಗೆ ಹೊಲಿಗೆ, 720 ಜನರಿಗೆ ಕಂಪ್ಯೂಟರ್ ಮತ್ತು 62 ಜನರಿಗೆ ಬ್ಯುಟಿಶಿಯನ್ ತರಬೇತಿಯನ್ನು ಉಚಿತವಾಗಿ ನೀಡಿ ಅವರು ಸ್ವಾಾವಲಂಬಿ ಜೀವನ ನಡೆಸಲು ಕಾರಣರಾಗಿದ್ದಾಾರೆ. ಇನ್ನೊೊಂದು ವಿಶೇಷವೆಂದರೆ, ಆಂಗ್ಲ ಮಾಧ್ಯಮ ಶಾಲೆ ಇವರದ್ದಾಾದರೂ ಇಲ್ಲಿ ಯಾವುದೇ ಡೊನೇಶನ್ ಇಲ್ಲ. ಬಡ ಮಕ್ಕಳಿಗೆ, ದಿಕ್ಕಿಿಲ್ಲದವರೇ ಇಲ್ಲಿ ಹೆಚ್ಚಿಿನ ವಿದ್ಯಾಾರ್ಥಿಗಳು. ಇಂತಹ ಸಾಮಾಜಿಕ ಸೇವೆ ಮಾಡುತ್ತಿಿರುವವರಿಗೆ ಸಾರ್ವಜನಿಕರು, ಸಂಘ-ಸಂಸ್ಥೆೆಗಳು ಬೆಂಬಲ ನೀಡಬೇಕಿದೆ.
published on 13.1.18
......................................

No comments:

Post a Comment