Wednesday 18 April 2018

ಸಂಗೀತ ಮಾಂತ್ರಿಿಕೆ
ವಸುಧಾ ಶರ್ಮಾ


  ಸಂಗೀತವನ್ನು ಆರಾಧಿಸುವ ನಾವು ಅದಕ್ಕೆೆ ಉನ್ನತ ಸ್ಥಾಾನವನ್ನು ಕೊಟ್ಟಿಿದ್ದೇವೆ. ಇದರಿಂದಾಗಿಯೇ ಇಂದು ಪ್ರತಿ ಪಟ್ಟಣದಲ್ಲೂ ಸಂಗೀತ ಶಾಲೆಗಳು ಕಂಡುಬರುತ್ತಿಿದ್ದು, ಅಲ್ಲಿಗೆ ಬರುವ ಮಕ್ಕಳ ಸಂಖ್ಯೆೆಯೂ ಹೆಚ್ಚುತ್ತಿಿದೆ.
ಶಿವಮೊಗ್ಗ ಜಿಲ್ಲೆೆಯಲ್ಲಿ ವಿದುಷಿ ವಸುಧಾ ಶರ್ಮಾ ಹೆಸರು ಕೇಳದವರಿಲ್ಲ. ಸಾಗರದಲ್ಲಿ ನಾದಸುಧಾ ಪ್ರತಿಷ್ಠಾಾನ ಆರಂಭಿಸಿ, ಅದರಡಿಯಲ್ಲಿ ಸದ್ಗುರು ಹಿಂದೂಸ್ಥಾಾನಿ ಶಾಸ್ತ್ರೀಯ ಸಂಗೀತ ವಿದ್ಯಾಾಲಯವನ್ನು ಚಾಮರಾಜಪೇಟೆಯಲ್ಲಿ ಸ್ಥಾಾಪಿಸಿದ್ದಾಾರೆ. ಹಿಂದೂಸ್ಥಾಾನಿ ಶಾಸ್ತ್ರೀಯ ಸಂಗೀತ ಮತ್ತು ಲಘು ಸಂಗೀತ ತರಗತಿಯನ್ನು ಇಲ್ಲಿ ಅವರು ನೀಡುತ್ತಿಿದ್ದಾಾರೆ. ಗ್ರಾಾಮಾಂತರ ಭಾಗದಲ್ಲಿರುವ ಸಂಗೀತ ಪ್ರತಿಭೆಗಳನ್ನು ವಯೋ ಭೇದವಿಲ್ಲದೆ ಬೆಳಕಿಗೆ ತರುವುದು ಅವರ ಪ್ರಮುಖ ಉದ್ದೇಶ. ಇದನ್ನು ಈಡೇರಿಸುವಲ್ಲಿ ಸತತ ಪ್ರಯತ್ನ ನಡೆಸುತ್ತಿಿರುವ ವಸುಧಾ, ಪ್ರತಿ ವರ್ಷ ನಡೆಸುವ ವಾರ್ಷಿಕ ಸಂಗೀತ ಮಹೋತ್ಸವ ಪ್ರಸಿದ್ಧವಾದುದು.
ವಸುಧಾ ಶಿರಸಿ ತಾಲೂಕಿನ ಗೋಳಗೋಡು ಗ್ರಾಾಮದವರು. ಇವರ ಕುಟುಂಬವೇ ಸಂಗೀತದ್ದು. ತಂದೆ ಗಜಾನನ ಹೆಗಡೆ ಹಾಡುಗಾರ ಮತ್ತು ಹಾರ್ಮೋನಿಯಂ ವಾದಕರಾದರೆ, ತಾಯಿ ಮೀನಾಕ್ಷಿ  ದೇವರ ನಾಮಗಳನ್ನು ನಾದಮಯವಾಗಿ ಹಾಡುವವರು. ಸಹೋದರಿ ಸಹ ಭರತನಾಟ್ಯ ಕಲಾವಿದೆ. ಇಂತಹ ವಾತಾವರಣದಲ್ಲಿ ಬೆಳೆದ ವಸುಧಾ,  ಪ್ರಾಾಥಮಿಕ ಸಂಗೀತ ಅಭ್ಯಾಾಸವನ್ನು ಶಿರಸಿಯಲ್ಲಿ ಪಂಡಿತ್ ಪ್ರಭಾಕರ್ ಭಟ್ಟ ಕೆರೆಕೈ ಇವರಲ್ಲಿ ಪಡೆದರು. ಅತ್ಯುತ್ತಮ ಹಾಡುಗಾರ್ತಿಯಾಗಿ ಬೆಳೆದರು. ಇನ್ನೊೊಂದೆಡೆ ತಬಲಾ ವಾದನವನ್ನು ಪಂಡಿತ್ ಮೋಹನ್ ಹೆಗಡೆ ಹುಣಸೆಕೊಪ್ಪ ಅವರ ಗರಡಿಯಲ್ಲಿ ಕಲಿತರು. ಹಾರ್ಮೋನಿಯಂನ್ನೂ ಸಹ ತಂದೆಯ ಮಾರ್ಗದರ್ಶನದಲ್ಲಿ ಕಲಿತು ಅನೇಕ ಹಾಡುಗಳನ್ನು ರಚಿಸಿದ್ದಾಾರೆ. ಇವರ ಕಂಠಸಿರಿ ಅದ್ಭುತವಾದದ್ದು. ಪ್ರತಿಧ್ವನಿಸುವ ಆಲಾಪ್‌ಗಳು ಕೇಳಲು ಇನ್ನಷ್ಟು ಸುಂದರವಾಗಿವೆ.
ಸದ್ಯ ಆಗ್ರಾಾ ಘರಾಣಾ ವಿದ್ವಾಾಂಸರಾಗಿರುವ ಪಂಡಿತ್ ಇಂದುಧರ್ ನಿರೋಡಿ ಅವರ ಶಿಷ್ಯೆೆಯಾಗಿರುವ ವಸುಧಾ, ದೇಶದ ಹಲವಡೆ ತಮ್ಮ ಸಂಗೀತ ಕಾಂ ರ್ಕ್ರಮಗಳನ್ನು ನಡೆಸಿಕೊಡುತ್ತಿಿದ್ದಾಾರೆ. ವಸುಧಾ ಅವರ ಪತಿ ಹಳೆಇಕ್ಕೇರಿಯ ನರಸಿಂಹಮೂರ್ತಿ ಅವರೂ ಸಹ ಮೃದಂಗವಾದಕರಾಗಿದ್ದಾಾರೆ. ಅತ್ಯುತ್ತಮ ಸಂಗೀತಜ್ಞೆಯಾಗಿದ್ದಲ್ಲದೆ, ಮಕ್ಕಳಿಗೂ ಅದೇ ರೀತಿಯ ಸಂಗೀತ ಶಿಕ್ಷಣವನ್ನು ಕಲಿಸುತ್ತಿಿದ್ದಾಾರೆ. ಇದರಿಂದ ಮಕ್ಕಳ ನೆಚ್ಚಿಿನ ಸಂಗೀತ ಶಿಕ್ಷಕಿಯಾಗಿದ್ದಾಾರೆ. ಸುಮಾರು 2 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ 21 ವರ್ಷಗಳಿಂದ ಶಿಕ್ಷಣ ನೀಡಿದ್ದಾಾರೆ.
ಕರ್ನಾಟಕ ಪ್ರಾಾಥಮಿಕ ಶಿಕ್ಷಣ ಮಂಡಳಿಯವರು ನಡೆಸುವ ಜೂನಿಯರ್, ಸೀನಿಯರ್ ಮತ್ತು ವಿದ್ವತ್, ವಿಶಾರದ ಮೊದಲಾದ ಪರೀಕ್ಷೆಗಳನ್ನು ತಮ್ಮ ಕೇಂದ್ರದ ಮೂಲಕ ನಡೆಸುತ್ತಿಿದ್ದಾಾರೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ ಪ್ರತಿಭಾನ್ವಿಿತರಿಗೆ ವಿದ್ಯಾಾರ್ಥಿ ವೇತನವನ್ನು ಕೊಡಿಸುತ್ತಿಿದ್ದಾಾರೆ. ಸಂಗೀತ ಶಿಬಿರ, ಪ್ರಾಾತ್ಯಕ್ಷಿಕೆಗಳ ನಡೆಸುತ್ತಿಿದ್ದಾಾರೆ. 
ಸಹ್ಯಾಾದ್ರಿಿ, ಶರಾವತಿ, ಇಕ್ಕೇರಿ, ಕರಾವಳಿ ಮೊದಲಾದ ಉತ್ಸವ, ಅನನ್ಯ ಸಂಗೀತೋತ್ಸವ, ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಾಾಯೋಜಿತ   ಸಮಾರಂಭಗಳಲ್ಲಿ, ವಾದಿರಾಜ ಸಂಗೀತೋತ್ಸವದಲ್ಲಿ ಕಾರ್ಯಕ್ರಮ ನೀಡಿದ್ದಾಾರೆ. ಮಲೆನಾಡು ಸಿರಿ, ಗಾಯನ ಗಂಗಾ, ಹವ್ಯಕಶ್ರೀ ಸಂಗೀತ ಅಮೃತ ವರ್ಷಿಣಿ, ಕಲಾ ಕೀರ್ತನಾ ಮೊದಲಾದ ಪ್ರಶಸ್ತಿಿಗಳು ಅವರ ಮುಡಿಗೇರಿವೆ.
ವಸುಧಾ ಸಂಗೀತದ ಮತ್ತು ಭಜನೆಯ ಹಲವು ಸಿಡಿಗಳನ್ನು ರಚಿಸಿದ್ದಾಾರೆ. ಇದರಲ್ಲಿ ಶ್ರೀ ದಕ್ಷಿಣಾಮೂರ್ತಿ ಸ್ತೋೋತ್ರಂ, ಮಾಧುರಿ ಪ್ರಸಿದ್ಧವಾದವು. ಇತ್ತೀಚೆಗೆ ಶಂಕರ ಸ್ತೋೋತ್ರ ಸ್ವರಮಂಜರಿ ಕುರಿತಾದ ‘ಬಂದುಶ್’ ಎಂಬ ಹಿಂದೂಸ್ಥಾಾನಿ ಶಾಸ್ತ್ರೀಯ ಸಂಗೀತ ಕೃತಿಯನ್ನು ಹೊರತಂದಿದ್ದಾಾರೆ. ಇದರಲ್ಲಿ ಸ್ತೋೋತ್ರಗಳನ್ನು ಹಿಂದೂಸ್ಥಾಾನಿಯ 30 ರಾಗಗಳಲ್ಲಿ ಅಳವಡಿಸಿರುವುದು ವಿಶೇಷವಾಗಿದೆ. ಇದನ್ನೇ ಆಡಿಯೊ ರೂಪದಲ್ಲಿ ಅವರು ಹಾಡಿದ್ದು ಅದರ ಸಿಡಿ ಬಿಡುಗಡೆ ಮಾಡಿದ್ದಾಾರೆ. ಈ ಸಿಡಿ ಮತ್ತು ಪುಸ್ತಕ ಆನ್‌ಲೈನ್‌ನಲ್ಲಿ ಲಭ್ಯವಿದೆ. ಹಿಂದೂಸ್ಥಾಾನಿಯಲ್ಲಿ ಸ್ವಂತ ಛಾಪನ್ನು ಮೂಡಿಸಿದ ಕಲಾವಿದೆ ಇವರು.
±published on 20- Jan 18
 ................................... 

No comments:

Post a Comment