Wednesday 18 April 2018


ಪವರ್ ಲಿಫ್ಟಿಿಂಗ್‌ ಸಾಧಕ
ವರ್ಷಿತ್ ರಾವ್ 

 ..
ದೇಹದ ಬಗ್ಗೆೆ ಸದಾ ಕಾಳಜಿ ಇಡಿ. ನೀವು ಉತ್ತಮವಾಗಿ ಬದುಕಲು ಇದೊಂದೇ ದಾರಿ ಎಂಬ ಮಾತಿದೆ. ಇದಕ್ಕಾಾಗಿ ದಿನನಿತ್ಯ ವ್ಯಾಾಯಾಮ, ದೈಹಿಕ ಕಸರತ್ತು ಮಾಡುವುದರ ಮೂಲಕ ದೇಹದಾರ್ಢ್ಯವನ್ನು ಬೆಳೆಸಿಕೊಳ್ಳಬೇಕು.
ವಿದ್ಯಾಾರ್ಥಿ ದೆಸೆಯಲ್ಲೇ ಇತ್ತೀಚೆಗೆ ವ್ಯಾಾಯಾಮ ಶಾಲೆಯ ಮೊರೆ ಹೋಗುವವರು ಹೆಚ್ಚುತ್ತಿಿದ್ದಾಾರೆ. ಉತ್ತಮ ದೇಹವನ್ನು ಸೃಷ್ಟಿಿಸಿಕೊಳ್ಳುವುದರ ಜೊತೆಗೆ  ಸಾಧನೆಗೂ ಕೈಹಾಕುತ್ತಾಾರೆ. ಅದರಲ್ಲಿ ಯಶಸ್ಸನ್ನೂ ಕಂಡು ಆಶ್ಚರ್ಯಪಡುವಂತೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಾಾರೆ. ನಗರದಲ್ಲಿ ಇಂತಹ ಯುವಕನೊಬ್ಬನಿದ್ದಾಾನೆ. ಈತ ಇನ್ನೂ ಸರಿಯಾಗಿ ಮೀಸೆ ಮೂಡದ ಹುಡುಗ. ಆದರೆ ಪವರ್ ಲಿಫ್ಟಿಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಪದಕ ಗೆದ್ದು ಬಂದಿದ್ದಾಾನೆ.ಸೆಪ್ಟೆೆಂಬರ್‌ನಲ್ಲಿ ದುಬೈನಲ್ಲಿ ನಡೆಯಲಿರುವ  ಏಶಿನ್ ಪವರ್ ಲಿಫ್ಟಿಿಂಗ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ಸನ್ನದ್ಧನಾಗಿದ್ದಾಾನೆ. ಸದ್ಯ ನಗರದ ಸರ್ಕಾರಿ  ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷವನ್ನು ಪಾಸಾಗಿರುವ ಈ ಯುವಕ ಬೇರೆ ಯಾರೂ ಅಲ್ಲ, ವರ್ಷಿತ್ ರಾವ್.
ಸಮರ್ಥವಾದ ದೇಹಧಾರ್ಡ್ಯವನ್ನು ಹೊಂದಿರುವ ವರ್ಷಿತ್, ನಗರದ ನೆಹರೂ ಕ್ರೀಡಾಂಗಣದ ವ್ಯಾಾಯಾಮ ಶಾಲೆಯಲ್ಲಿ ಸುಮಾರು 3 ವರ್ಷದಿಂದ ನಿರಂತರ ತರಬೇತಿ ಪಡೆಯುತ್ತಿಿದ್ದಾಾನೆ. ತರಬೇತಿಯಲ್ಲಿ ಏಕತಾನತೆ, ನಿಷ್ಠೆೆ ಮತ್ತು ಕಠಿಣ ಶ್ರಮ ವಹಿಸುವುದು ಅತಿ ಮುಖ್ಯ. ಇದನ್ನೆೆಲ್ಲ ಕರಗತ ಮಾಡಿಕೊಂಡೇ ಕಣಕ್ಕಿಿಳಿದಿರುವುದರಿಂದ ಅತಿ ಸುಲಭದಲ್ಲಿ ಇದನ್ನೆೆಲ್ಲ ನಿಭಾಯಿಸುತ್ತಿಿದ್ದಾಾನೆ. ಇಂದಿಗೂ ತನ್ನ ಕಾಲೇಜು ಪಾಠವನ್ನು ಮಗಿಸಿದ ನಂತರ ಸಂಜೆ ಎರಡು ಗಂಟೆ ವ್ಯಾಾಯಾಮ ಶಾಲೆಗೆ ತೆರಳಿ ಜನಾರ್ದನ್ ಅವರಲ್ಲಿ ಪ್ರಾಾಕ್ಟೀಸ್ ನಡೆಸುತ್ತಾಾರೆ.
ಈಗಾಗಲೇ ರಾಜ್ಯ, ದಕ್ಷಿಣ ಭಾರತ ಮತ್ತು ರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊೊಂಡು ಅನುಭವ ಹೊಂದಿರುವುದರಿಂದ ದುಬೈನಲ್ಲಿ ನಡೆಯಲಿರುವ ಏಶಿಯನ್ ಸ್ಪರ್ಧೆಯಲ್ಲಿ ಉತ್ತಮ ಫಲಿತಾಂಶವನ್ನು ನೀಡುವ ವಿಶ್ವಾಾಸ ಹೊಂದಿರುವ ವರ್ಷಿತ್, ಇದಕ್ಕಾಾಗಿ ಸತತ ತರಬೇತಿಯಲ್ಲಿದ್ದಾಾನೆ. ಕ್ರೀಡೆಯಲ್ಲೂ ಮುಂದಿರುವ ಈತನಿಗೆ ಉಪನ್ಯಾಾಸಕರು ಎಲ್ಲ ರೀತಿಯ ಬೆಂಬಲ ಮತ್ತು ಪ್ರೋತ್ಸಾಾಹ ನೀಡುತ್ತಿಿದ್ದಾಾರೆ. ಇದರಿಂದ ಇನ್ನಷ್ಟು ಸಾಧನೆ ಮಾಡುವ ಕಾತರದಲ್ಲಿದ್ದಾಾನೆ. 
ಶಿವಮೊಗ್ಗದವರೇ ಆದ ಎ. ಶಶಿಧರ್ ಅವರ ಪುತ್ರನಾಗಿರುವ ವರ್ಷಿತ್, 2016ರ ಡಿಸೆಂಬರ್‌ನಲ್ಲಿ  ಜೆಮ್ಶೆೆಡ್‌ಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಪವರ್ ಲಿಫ್ಟಿಿಂಗ್‌ನಲ್ಲಿ415 ಕೆ.ಜಿ ತೂಕ ಎತ್ತಿಿ ಕಂಚಿನ ಪದಕ ಗಳಸಿದ್ದಾಾನೆ. ಅದೆ ವಿಭಗದ ಬೆಂಚ್ ಪ್ರೆೆಸ್ ವಿಭಗದಲ್ಲಿ 90 ಕೆ. ಜಿ. ಭಾರವನ್ನು ಎತ್ತಿಿ ಬೆಳ್ಳಿಿ ಪದಕ ಜಯಿಸಿದ್ದಾಾನೆ. 2016ರ ಮಾರ್ಚಿನಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಬೆಂಚ್ ಪ್ರೆೆಸ್ ವಿಭಾಗದ ಸ್ಪರ್ಧೆಯಲ್ಲೂ  ಕಂಚಿನ ಪದಕ ಗಳಿಸಿದ್ದಾಾನೆ.  2017ರ ಮೇನಲ್ಲಿ ಮಹಾರಾಷ್ಟ್ರದಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಿಂಗ್ ಸ್ಪರ್ಧೆ, ಲಖೋದಲ್ಲಿ ಜರುಗಿದ ಪವರ್ ಲಿಫ್ಟಿಿಂಗ್ ಮತ್ತು ಬೆಂಚ್‌ಪ್ರೆೆಸ್ ಸ್ಪರ್ಧೆಯಲ್ಲಿ ಮತ್ತು ಕಾಮನ್ವೆೆಲ್‌ತ್‌ ಕ್ರೀಡಾಕೂಟದ ಆಯ್ಕೆೆಯಲ್ಲೂ ಪಾಲ್ಗೊೊಂಡಿದ್ದನು.
  2017ರ ಆಗಸ್‌ಟ್‌‌ನಲ್ಲಿ ಕೇರಳದ ಅಲಪ್ಪಿಿಯಲ್ಲಿ ನಡೆದ ದಕ್ಷಿಣ ಭಾರತ ಪವರ್ ಲಿಫ್ಟಿಿಂಗ್ ಸ್ಪರ್ಧೆಯಲ್ಲಿ ಚಿನ್ನ, ಮಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಬೆಂಚ್ ಪ್ರೆೆಸ್  ಸ್ಪರ್ಧೆಯಲ್ಲಿ ಕಂಚು ಮತ್ತು ರಾಜ್ಯಮಟ್ಟದ ಪವರ್ ಲಿಫ್ಟಿಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಿ ಮತ್ತು ಬೆಂಚ್ ಪ್ರೆೆಸ್‌ನಲ್ಲಿ ಚಿನ್ನದ ಪದಕಗಳಿಸಿದ ಕೀರ್ತಿ ಈತನದು. ಕಳೆದ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ಜರುಗಿದ ರಾಜ್ಯ ಪವರ್ ಲಿಫ್ಟಿಿಂಗ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಜಯಿಸಿದರೆ, ಈ ವರ್ಷದ ಫೆಭ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಬೆಂಚ್‌ಪ್ರೆೆಸ್‌ನಲ್ಲೂ ಚಿನ್ನದ ಬೇಟೆಯಾಡಿ ಬಂದಿದ್ದಾಾನೆ. ಜೊತೆಗೆ ಬೆಸ್‌ಟ್‌ ಲಿಫ್ಟರ್ ಆಫ್ ಕರ್ನಾಟಕ ಪ್ರಶಸ್ತಿಿಗೂ ಭಾಜನನಾಗಿದ್ದಾಾನೆ. ಮಾರ್ಚಿನಲ್ಲಿ ರಾಂಚಿಯಲ್ಲಿ ಜರುಗಿದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಮತ್ತೆೆ ಚಿನ್ನದ ಪದಕ ಧರಿಸಿದ್ದಾಾನೆ. ಇಂತಹ ಚಿನ್ನದ ಹುಡುಗ ಈಗ ಅಂತಾರಾಷ್ಟ್ರೀಯ ಸ್ಪರ್ಧೆಗೆ ಸಜ್ಜಾಾಗುತ್ತಿಿದ್ದಾಾನೆ.     
14.4.18
..........................................

No comments:

Post a Comment