Wednesday 18 April 2018

ಕ್ರಿಿಯಾಶೀಲ ಉಪನ್ಯಾಾಸಕ
ಟಿ.ಆರ್. ಗುರುಪ್ರಸಾದ್


ಕ್ರಿಿಯಾಶೀಲ ವ್ಯಕ್ತಿಿಗೆ ಸಾಧನೆಯೇ ಗುರಿಯಾದಾಗ ಇಚ್ಛಾಾಶಕ್ತಿಿಯಿಂದ ಅದನ್ನು ಸಾಧಿಸುತ್ತಾಾನೆ. ಆತನಿಗೆ ಜ್ಞಾಾನಕ್ಕಿಿಂತ ಆತನ ಕಲ್ಪನಾಶಕ್ತಿಿಯೇ ಹೆಚ್ಚಿಿನ ಬಲವನ್ನು ನೀಡುತ್ತದೆ. ಪರಿಶುದ್ಧ ಮನಸ್ಸಿಿದ್ದರೆ ಕ್ರಿಿಯಾಶೀಲತೆ ಎಂತಹವರನ್ನೂ ಆವರಿಸಿಬಿಡುತ್ತದೆ.
ಟಿ. ಆರ್. ಗುರುಪ್ರಸಾದ್ ಇಂತಹ ಒಬ್ಬ ಕ್ರಿಿಯಾಶೀಲ ಮನಸ್ಸಿಿನ, ಸದಭಿರುಚಿಯ ಸಾಧಕ, ಕಲಾವಿದ. ಇವರ ಹವ್ಯಾಾಸಗಳು ಒಂದೆರಡಲ್ಲ. ಮಿಮಿಕ್ರಿಿ, ಗಾಯನ, ಅಭಿನಯ, ನಿರ್ದೇಶನ, ರಂಗಪರಿಕರಗಳ ತಯಾರಿ, ನೃತ್ಯ, ಬರವಣಿಗೆ ಇತ್ಯಾಾದಿ. ಇಂತಹ ಅಸಾಧಾರಣ ಪ್ರತಿಭೆಯ ಗುರುಪ್ರಸಾದ್ ಶಿರಾಳಕೊಪ್ಪದವರು. ಕುವೆಂಪು ವಿಶ್ವವಿದ್ಯಾಾಲಯದಲ್ಲಿ ಕನ್ನಡ ಎಂಎ ಮುಗಿಸಿ ಶಿರಾಳಕೊಪ್ಪದ ಕದಂಬ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಾಸಕರಾಗಿ ಕೆಲಸ ಮಾಡುತ್ತಿಿದ್ದಾಾರೆ. 
ಸಾಣೆಹಳ್ಳಿಿಯ ಶಿವಸಂಚಾರ ನಾಟಕ ತಂಡದಲ್ಲಿ, ನೀನಾಸಂನಲ್ಲಿ ಮತ್ತು ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿರುವ ನಿರ್ದೇಶಕರ ತರಬೇತಿ ಶಿಬಿರದಲ್ಲಿ ರಂಗ ತರಬೇತಿ ಪಡೆದಿದ್ದಾಾರೆ. ಬೆಂಗಳೂರಿನ ಜನಸಂಸ್ಕೃತಿ ತಂಡದಲ್ಲಿ 1 ತಿಂಗಳ ಅಭಿನಯ ಮತ್ತು ದೇಹವಿನ್ಯಾಾಸ ತರಬೇತಿಯನ್ನು ಪಡೆದಿದ್ದಾಾರೆ. ಮೂಕಾಭಿನಯ ಶಿಬಿರದಲ್ಲೂ ತರಬೇತಿ ಹೊಂದಿದ್ದಾಾರೆ.
ಶಿರಾಳಕೊಪ್ಪದಲ್ಲಿ ಸಿರಿಯಾಳ ಕಲಾಕೇಂದ್ರವನ್ನು 16 ವರ್ಷಗಳಿಂದ ನಡೆಸಿಕೊಂಡು ಬರುತ್ತಿಿದ್ದಾಾರೆ. ಇದರ ಮೂಲಕ ಅನೇಕ ಶಿಬಿರಗಳನ್ನು ಆಯೋಜಿಸುತ್ತ ಯುವಕರಿಗೆ ನಾಯಕತ್ವ, ವ್ಯಕ್ತಿಿತ್ವ ವಿಕಸನ, ಸಂಘಟನೆ, ಒತ್ತಡ ನಿರ್ವಹಣೆ, ಯೋಗಾಸನ, ಸಂಗೀತ, ಭಾಷಣ ಕಲೆ, ವರದಿಗಾರಿಕೆ, ಪರಿಸರ ಜಾಗೃತಿ ಮೊದಲಾದ  ವಿಷಯಗಳ ಬಗ್ಗೆೆ ಮಾರ್ಗದರ್ಶನ ನೀಡುತ್ತಿಿದ್ದಾಾರೆ.
ಗುರುಪ್ರಸಾದ್ ಸುಮಾರು 10 ರೂಪಕ, 11 ನಾಟಕ 11 ಬೀದಿ ನಾಟಕ, 13 ರೂಪಕಗಳನ್ನು ನಿರ್ದೇಶಿಸಿದ್ದಾಾರೆ. 16 ನಾಟಕಗಳಲ್ಲಿ ಅಭಿನಯಿಸಿದ್ದಾಾರೆ. ಇವರ ಅಭಿನಯದ ಕೆಲವು ನಾಟಕಗಳೆಂದರೆ, ಆಮ್ರಪಾಲಿ, ಮತಾಂತರ, ಮೂರು ಮೆಟ್ಟಿಿಲ ಕಥೆ, ಬೆರಳ್ಗೆೆ ಕೊರಳ್, ಶರೀಫ, ಜೊತೆಗಿರುವನು ಚಂದಿರ, ಎದೆಗಾರಿಕೆ, ಮರುಭೂಮಿಯಲ್ಲೊೊಂದು ಯಾನ ಮೊದಲಾದವು. ನಿರ್ದೇಶಿಸಿದ ಕೆಲವು ನಾಟಕಗಳಲ್ಲಿ ಸೂಳೆ ಸನ್ಯಾಾಸಿ, ಪ್ರಳಯ, ಗೋವಿನ ಹಾಡು, ಕ್ರೌೌರ್ಯ, ಟೋಪಿ ಬೇಕಾ ಟೋಪಿ ಮೊದಲಾದವು ಪ್ರಮುಖವಾದುವು. ತಮ್ಮ ಸಿರಿಯಾಳ ಕಲಾಕೇಂದ್ರದ ವತಿಯಿಂದ ರಾಜ್ಯದಾದ್ಯಂತ ಹಲವು ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾಾರೆ. 
 ಸುಮಾರು 1600ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ಪ್ರದರ್ಶಿಸಿರುವ ಇವರು, ಭಗವದ್ಗೀತೆ ಕಿರು ಸಿನಿಮಾದಲ್ಲಿ ಅರ್ಜುನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಾರೆ. ನಾಲ್ಕಾಾರು (ಆಕಾಂಕ್ಷೆ, ಮಿಡ್‌ಲ್‌‌ಕ್ಲಾಾಸ್) ಧಾರವಾಹಿಗಳಲ್ಲಿ ಮತ್ತು ವಾರ್ತಾ ಇಲಾಖೆಯ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಿದ್ದಾಾರೆ. ಶಿರಾಳಕೊಪದಲ್ಲಿ ಕಬಡ್ಡಿಿ ಕೋಚಿಂಗ್ ಕೇಂದ್ರ ತೆರೆಯುವ ಮೂಲಕ ಆ ಕ್ರೀಡೆ ಗ್ರಾಾಮಾಂತರದಲ್ಲಿ ಜೀವಂತಿಕೆ ಪಡೆಯುವಂತೆ ಮಾಡುತ್ತಿಿದ್ದಾಾರೆ. ಸುಮಾರು 60ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ 6 ತಿಂಗಳು ಸುಗಮ ಸಂಗೀತ, ಜಾನಪದ ಮತ್ತು ರಂಗಗೀತೆಗಳ ಉಚಿತ ಶಿಬಿರವನ್ನು ನಡೆಸಿದ್ದಾಾರೆ. ತಮ್ಮ ಈ ಎಲ್ಲ ಬೆಳವಣಿಎಗಗೆ ಶಿಕಾರಿಪುರ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಾಸಕರಾಗಿದ್ದ ತನ್ನ ಗುರು, ಹಾಲಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಬಿ. ವಿ. ವಸಂತಕುಮಾರ್ ಅವರೇ ಕಾರಣ ಎನ್ನುವುದನ್ನು ಮನದುಂಬಿ ನುಡಿಯುತ್ತಾಾರೆ.   
ಎನ್‌ಎಸ್‌ಎಸ್‌ನಲ್ಲಿ ಇವರು ವಹಿಸಿರುವ ಪಾತ್ರ ಅತಿ ಮಹತ್ವದ್ದು. 9 ಅಂತರ್ ಕಾಲೇಜು, ಒಂದು ರಾಜ್ಯ ಮಟ್ಟದ ಮತ್ತು ಎರಡು ಆಂತರ್ ರಾಜ್ಯ ಶಿಬಿರಗಳಲ್ಲಿ ತಂಡವನ್ನು ಮುನ್ನಡೆಸಿದ್ದಾಾರೆ. ಜಿಲ್ಲಾಾ ಶಿಬಿರಾಧಿಕಾರಿಯಾಗಿ, ಸಹಶಿಬಿರಾಧಿಕಾರಿ ಮತ್ತು ಕಾರ್ಯಕ್ರಮಾಧಿಕಾರಿಯಾಗಿಯೂ ಕೆಲಸ ಮಾಡಿದ್ದಾಾರೆ. ಇವರ ಈ ಎಲ್ಲ ಸಾಧನೆ ಗಮನಿಸಿ 2001-02ರಲ್ಲಿ ಕುವೆಂಪು ವಿವಿ ಅತ್ಯುತ್ತಮ ಎನ್‌ಎಸ್‌ಎಸ್ ಸ್ವಯಂಸೇವಕ ಪ್ರಶಸ್ತಿಿ, 2002-03ರಲ್ಲಿ ಎನ್‌ಎಸ್‌ಎಸ್ ರಾಜ್ಯ ಪುರಸ್ಕಾಾರ ದೊರೆತಿದೆ.  ಇತ್ತೀಚೆಗಷ್ಟೇ ಪಿಎಚ್‌ಡಿ ಪದವಿಯನ್ನು ಹಂಪಿ ವಿವಿಯಿಂದ ಪಡೆದುಕೊಂಡಿದ್ದಾಾರೆ.
24.3.18
........................................   

No comments:

Post a Comment