Wednesday 18 April 2018


ಯೋಗ ಸಾಧಕಿ
ಅನ್ನಪೂರ್ಣಾ
,,,,,,,,,,,,,,,,,,,,,,,
ನಾವು ಏನನ್ನು ಹೇಳುತ್ತೇವೆಯೋ ಅದನ್ನು ಜನರು ನಂಬುವುದಿಲ್ಲ. ಆದರೆ ಏನನ್ನು ಮಾಡಿತೋರಿಸುತ್ತೇವೆಯೋ ಅದನ್ನು ನಂಬುತ್ತಾಾರೆ.  ನಮ್ಮನ್ನು ನಂಬಿದಾಗ ನಾವು ಹೇಳಿದ್ದನ್ನೆೆಲ್ಲಾಾ ಕೇಳಿಸಿಕೊಳ್ಳುತ್ತಾಾರೆ, ಆನಂತರ ಅದನ್ನು ಸಾಧಿಸಲು ಮುಂದಾಗುತ್ತಾಾರೆ. ಈ ರೀತಿ ನಂಬಿಕೆ ಮೂಲಕವೇ ಸಾವಿರಾರು ಜನರಲ್ಲಿ ಪತಂಜಲಿ ಯೋಗದ ಅರಿವನ್ನು ಮೂಡಿಸಿ, ಹಬ್ಬಿಿಸಿದವರು ಭದ್ರಾಾವತಿಯ ಅನ್ನಪೂರ್ಣಾ.
ಅನ್ನಪೂರ್ಣಾ ಯೋಗ ಸಾಧಕಿ. ಜೊತೆಗ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪನ್ನು ಮೂಢಿಸಿದವರು. 16 ವರ್ಷದಿಂದ ಯೋಗವನ್ನು ಕಲಿಸುತ್ತಿಿದ್ದಾಾರೆ. ತಮ್ಮ ಅನಾರೋಗ್ಯದ ನಿವಾರಣೆಗಾಗಿ ಯೋಗ ಮಾಡಿದರು. ಆಗ ಯಾರಿಂದಲೂ ಕಲಿಯಲಿಲ್ಲ. ಬದಲಾಗಿ ಟಿವಿಯಲ್ಲಿ ಬರುತ್ತಿಿದ್ದುದನ್ನೇ ನೋಡಿ ಕಲಿತರು. ಅದರಿಂದ ಗುಣಮುಖರಾದ ಆನಂತರ ಯೋಗದ ಬಗ್ಗೆೆ ಇತರರಿಗೆ ತಿಳಿಗೇಳಿ ಅದರ ಲಾಭ ಸಿಗಲು ಸ್ವತಃ ತಾವೇ ಯತ್ನಿಿಸಿದರು. ಇದಕ್ಕಾಾಗಿ ಹರಿದ್ವಾಾರಕ್ಕೆೆ ತೆರಳಿ ಅಲ್ಲಿ ಪಂತಜಲಿ ಯೋಗ ಕಲಿಕೆಯ ತರಬೇತಿ ಪಡೆದು ಬಂದು, ಇಂದು ಸಾವಿರಾರು ಜನರಿಗೆ ಶಿಬಿರ ನಡೆಸಿ ಮಾರ್ಗದರ್ಶಿಯಾಗಿದ್ದಾಾರೆ.
ಸದ್ಯ ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆೆಗೆ ಪತಂಜಲಿ ಯೋಗ ರಾಜ್ಯ ಸಮಿತಿಯ ಉಸ್ತುವಾರಿಯಾಗಿ ಕೆಲಸ ಮಾಡುತ್ತಿಿದ್ದಾಾರೆ. ಮೂಲತಃ ರಿಪ್ಪನ್‌ಪೇಟೆ ಸಮೀಪದ ಕಲ್ಲೂರಿನವರಾದ ಇವರು ಓದಿದ್ದು ತೀರ್ಥಹಳ್ಳಿಿಯಲ್ಲಿ. ಕಲ್ಲೂರಿನಲ್ಲಿ ಕೀರ್ತಿ ಮಹಿಳಾ ಮಂಡಳಿಯನ್ನು ಹುಟ್ಟು ಹಾಕಿ ಆ ಮೂಲಕ ವಯಸ್ಕರ ಶಿಕ್ಷಣ ಜಾಗೃತಿ ಮೂಡಿಸಿದರು. ಯುವಜನ ಮೇಳದ ವಿವಿಧ ನೃತ್ಯ-ಗೀತೆ ಸ್ಪರ್ಧೆಯಲ್ಲಿ ತಮ್ಮ ಮಹಿಳಾ ಮಂಡಳಿ ಬಹುಮಾನ ಗಿಟ್ಟಿಿಸುವಂತೆ ಮಾಡಿದರು. ವಿವಾಹವಾಗಿ ಭದ್ರಾಾವತಿಗೆ ತೆರಳಿದ ನಂತರವೂ ಅಲ್ಲಿಯ ಹಳೆನಗರದಲ್ಲಿ ಮಹಿಳಾ ಸೇವಾ ಸಮಾಜ ಬೆಳೆಸಿದರು. ಅದರ ಮೂಲಕ ಮಹಿಳೆಯರನ್ನು ಸಂಘಟಿಸಿ ವಿವಿಧ ಕಾರ್ಯಕ್ರಮ ಆರಂಭಿಸಿದರು. ಬ್ಯುಟಿಶಿಯನ್, ಟೇಲರಿಂಗ್ ಮೊದಲಾದ ತರಬೇತಿಯನ್ನು ಉಚಿತವಾಗಿ ಕೊಡಿಸಿದರು. ಈ ರೀತಿ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯಕ್ತಿಿಯಾಗಿ ಯೋಗವನ್ನೂ ಬೆಳೆಸಿದರು.
ಸ್ವಂತ ಸಿದ್ದ ಉಡುಪು ತಯಾರಿಕಾ ಸಂಸ್ಥೆೆಯನ್ಬು ನಡೆಸುತ್ತ ಮಹಿಳಾ ಉದ್ಯಮಿಯಾಗಿಯೂ ಹೊರಹೊಮ್ಮಿಿದರು. ಇಷ್ಟೆೆಲ್ಲಾಾ ಒತ್ತಡದ ಕೆಲಸದ ಮಧ್ಯೆೆ ಮನೆಯ ಕೆಲಸ ನೋಡಿಕೊಳ್ಳುವುದು, ವಿವಿಧ ಗ್ರಾಾಮಗಳಿಗೆ ತೆರಳಿ ಯೋಗ ಕಲಿಸುವುದನ್ನ್ನೂ ಬಿಡಲಿಲ್ಲ. ಪ್ರತಿದಿನ ಬೆಳಿಗ್ಗೆೆ 4 ರಿಂದ 6 ಗಂಟೆಯವರೆಗೆ ತಾಲೂಕಿನ ನೂರಾರು ಗ್ರಾಾಮಗಳಿಗೆ ಹೋಗಿ ಯೋಗ ಕಲಿಸಿ ಬಂದಿದ್ದಾಾರೆ. ಈಗ ಆ ಹಳ್ಳಿಿಗಳಲ್ಲಿ ಉಪ ಶಿಕ್ಷಕರನ್ನು ನೇಮಿಸಿದ್ದಾಾರೆ. ಅವಕಾಶ ದೊರೆತಾಗೆಲ್ಲ ತೆರಳಿ ಪರಿಶೀಲನೆ ನಡೆಸುತ್ತಾಾರೆ.  ನಮ್ಮ ಆಹಾರ ಪದ್ದತಿ ಮತ್ತು ಜೀವನಶೈಲಿಯಿಂದ ಇಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿಿದ್ದೇವೆ ಎನ್ನುವ ಅವರು, ಸುದರ್ಶನ ಕ್ರಿಿಯೆಯನ್ನೂ ಕಲಿತಿದ್ದಾಾರೆ. ತಾಲೂಕಿನಲ್ಲಿ ಸುಮಾರು 400 ಯೋಗ ಶಿಬಿರ ಇಂದಿಗೂ ನಡೆಯುವಂತೆ ಮಾಡಿದ ಕೀರ್ತಿ ಅವರದ್ದು. ಇದಕ್ಕೆೆ ಯಾವುದೇ ರೀತಿಯಲ್ಲೂ ಹಣ ಪಡೆಯದೆ ಉಚಿತವಾಗಿ ಕಲಿಸಿದ್ದು ಇನ್ನೂ ಮಹತ್ವದ ವಿಷಯ.
ಸುಮಾರು 6 ಮದ್ಯವರ್ಜನ ಶಿಬಿರವನ್ನೂ ಭದ್ರಾಾವತಿಯಲ್ಲಿ ನಡೆಸಿದ್ದಾಾರೆ. ಇದರಿಂದ ಹಲವು ಕುಟುಂಬಗಳು ಇಂದು ನೆಮ್ಮದಿಯಾಗಿ ಬದುಕುವಂತೆ ಮಾಡಿದ್ದಾಾರೆ. ಮಹಿಳಾ ಸಮಾಜ, ಭೂಮಿಕಾ ಸಂಸ್ಥೆೆ, ಒಕ್ಕಲಿಗರ ಸಂಘ, ಜಾನಪದ ಪರಿಷತ್  ಮೊದಲಾದ ಸಂಘಟನೆಗಳಲ್ಲಿ ಸಕ್ರಿಿಯರಾಗಿದ್ದಾಾರೆ. 2015ರಲ್ಲಿ ಭದ್ರಾಾವತಿಯಲ್ಲಿ ರಾಜ್ಯ ಮಹಿಳಾ ಉದ್ಯಮಿಗಳ ಸಮಾವೇಶವನ್ನು ಯಶಸ್ವಿಿಯಾಗಿ ನಡೆಸಿದ್ದಾಾರೆ. ಇವರ ಸಾಧನೆ ಗಮನಿಸಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಗೌರವಿಸಿದೆ. ಮಹಿಳಾ ದಿನಾಚರಣೆಯಂದು ಮತ್ತು ಮಹಿಳಾ ಉದ್ಯಮಿಗಳ ಸಮಾವೇಶದಲ್ಲೂ ಸನ್ಮಾಾನಕ್ಕೆೆ ಭಾಜನರಾಗಿದ್ದಾಾರೆ.
ಗೃಹಿಣಿಯಾಗಿ, ಮಹಿಳಾ ಉದ್ಯಮಿಯಾಗಿ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾಾ, ಸಾವಿರಾರು ಜನರಿಗೆ ಯೋಗವನ್ನು ಉಚಿತವಾಗಿ ಕಲಿಸಿದ ಅನ್ನಪೂರ್ಣಾ ಅಪೂರ್ವ ಯೋಗ ಸಾಧಕಿ ಎನ್ನಬಹುದು. 
17.2.18
   ..........................

No comments:

Post a Comment