Wednesday 18 April 2018

ಚಿತಾಗಾರ ಕಾಯಕದ 
ಅನಸೂಯಮ್ಮ




ಕೆಲಸ ಯಾವುದಾದರೂ ಆಗಲಿ, ಅದರಲ್ಲಿ ನಿಷ್ಠೆೆ, ಪ್ರಾಾಮಾಣಿಕತೆಯನ್ನು ತೋರಿದಲ್ಲಿ ನಾವು ಗುರುತಿಸಲ್ಪಡುತ್ತೇವೆ. ಅದು ಸಣ್ಣದಿರಲಿ, ದೊಡ್ಡದಿರಲಿ, ನಮ್ಮನ್ನು ಚೆನ್ನಾಾಗಿ ತೊಡಗಿಸಿಕೊಂಡಲ್ಲಿ ಎಲ್ಲರನ್ನೂ ಆಕರ್ಷಿಸುತ್ತೇವೆ. ಇಲ್ಲಿ ನಮ್ಮ ಗುಣ  ಮುಖ್ಯವಾಗುತ್ತದೆಯೇ ವಿನಾ ಕೆಲಸವಲ್ಲ. ಪ್ರಾಾಮಾಣಿಕತೆ ಇದ್ದರೆ ಎಲ್ಲಾಾದರೂ ಕೆಲಸ ಸಿಗುತ್ತದೆ.   
ಅನಸೂಯಮ್ಮ ಸುಮಾರು 405ರ ಹರಯದವರು. ಇವರಿಗೆ ಚಿತಾಗಾರವೇ ಆಶ್ರಯತಾಣ. ಇಲ್ಲಿಗೆ ಬರುವವರಲ್ಲೇ ಗೆಳೆತನ, ಸಂಬಂಧ ಕಾಣುುತ್ತಾಾರೆ. ಏಕೆಂದರೆ ಇವರಿಗೆ ಬೇರೆ ಯಾರೂ ಇಲ್ಲ, ಸ್ವಂತ ಸೂರೂ ಇಲ್ಲ. ಹೆಣ ಸುಟ್ಟು ಜೀವನ ಸಾಗಿಸುವುದೇ ಇವರ ಕಾಯಕ. ಎಂದಿಗೂ ಈ ಕೆಲಸ ಬಗ್ಗೆೆ ಅವರು ನೊಂದಿಲ್ಲ. ಅಥವಾ ಬೇಸರ ಮೂಡಿಸಿಲ್ಲ. ದುಡಿಮೆಗೆ ಯಾವ ಕೆಲಸವಾದರೇನು? ಇಲ್ಲಿಯೇ ತನ್ನ ಬದುಕನ್ನು ಕಟ್ಟಿಿಕೊಂಡಿದ್ದಾಾರೆ.
ಶಿವಮೊಗ್ಗದ ತುಂಗಾನದಿ ದಡದಲ್ಲಿರುವ ರೋಟರಿ ಚಿತಾಗಾರದಲ್ಲಿ ಬಂದ ಹೆಣಗಳಿಗೆ ಮುಕ್ತಿಿ ಕೊಡುವ ಕೆಲಸವನ್ನು 18 ವರ್ಷದಿಂದ ಇವರು ಮಾಡುತ್ತಿಿದ್ದಾಾರೆ. ಅವರಿಗೆ ಅದರಲ್ಲೇ ತೃಪ್ತಿಿ. ಏಕೆಂದರೆ ಯಾವುದೇ ತಾರತಮ್ಯವಿಲ್ಲದ ಸ್ಥಳ ಇದ್ದರೆ ಅದುವೇ ಸ್ಮಶಾನ. ಎಲ್ಲರೂ ಇಲ್ಲಿ ಸರಿಸಮಾನರು. ಎಷ್ಟೋೋ ಅನಾಥ ಶವಗಳು, ಎಷ್ಟೋೋ ಶ್ರೀಮಂತರ ಶವಗಳು ಬರುತ್ತವೆ. ಎಲ್ಲರನ್ನೂ ಸಮಾನವಾಗಿಯೇ ಅಂತ್ಯಕ್ರಿಿಯೆ ಮಡುತ್ತಾಾರೆ.
ಅನಸೂಯಮ್ಮ ಅವರ ಕುಟುಂಬದವರು ಮೂಲತಃ ಗೋಕರ್ಣದವರು. ಇವರು ಚಿಕ್ಕವರಿದ್ದಾಾಗಲೇ ಬಡತನದ ನಿಮಿತ್ತ ತಂದೆ- ತಾಯಿ ಶಿವಮೊಗ್ಗಕ್ಕೆೆ ಬಂದು ನೆಲೆಸಿದ್ದರು. ಶಿವಮೊಗ್ಗದವರೇ ಆದ ನಂತರ ಇಲ್ಲಿಯೇ ಮದುವೆಯನ್ನು ಮಾಡಿಕೊಂಡರು. ಆದರೆ ವೈವಾಹಿಕ ಜೀವನ ಸುಖಮಯವಾಗಿರಲಿಲ್ಲ. ಪತಿ ದುಶ್ಚಟದ ದಾಸ. ಇದರಿಂದಾಗಿ ಜೀವನ ನರಕಸದೃಶವಾಯಿತು. ಪತಿ ಮಾಡಿದ ಸಾಲ ತೀರಿಸುವುದೇ ಇವರ ಕೆಲಸವಾಯಿತು. ಈ ಮಧ್ಯೆೆ ತಂದೆ- ತಾಯಿ ಗತಿಸಿದ್ದರು. ಪತಿಯೊಂದಿಗೆ  ಸೇರಿ ಸ್ಮಶಾನದಲ್ಲಿ ಕೆಲಸ ಗಿಟ್ಟಿಿಸಿಕೊಂಡರು. ಕೆಲವೇ ವರ್ಷಗಳಲ್ಲಿ ಪತಿ ಇನ್ನಿಿಲ್ಲವಾದರು. ಮಕ್ಕಳ ಭಾಗ್ಯವೂ ಇವರಿಗಿಲ್ಲದ ಕಾರಣ ಅಲ್ಲಿಂದ ಶುರುವಾಯಿತು ಅವರ ಒಬ್ಬಂಟಿ ಜೀವನ. 
  ಹೋರಾಟದ ಮೂಲಕ ಬದುಕನ್ನು ಕಟ್ಟಿಿಕೊಳ್ಳುವಂತಹ ಸ್ಥಿಿತಿ ಎದುರಾಯಿತು. ಆದರೂ ಹಿಂದಡಿ ಇಡದೆ, ಎದೆಗುಂದದೆ ಕೆಲಸ ಮುಂದುವರೆಸಿದರು. ಏಕೆಂದರೆ, ಸಮಾಜದಲ್ಲಿ ಅವಮಾನ, ಆತ್ಮಸ್ಥೈರ್ಯ ಕುಗ್ಗಿಿಸುವವರ ಮಧ್ಯೆೆ ಇರುವುದಕ್ಕಿಿಂತ ಇಂತಹ ವೃತ್ತಿಿಯನ್ನು ಸವಾಲಾಗಿ ಸ್ವೀಕರಿಸಿ ಬದುಕುವುದೇ ಲೇಸೆಂದು ನಿರ್ಧರಿಸಿದರು. ಈಗ ಬರೋಬ್ಬರಿ 18 ವರ್ಷದ ಸೇವೆ ಅವರದ್ದಾಾಗಿದೆ.
  ಇಂತಹ ಪರಿಸ್ಥಿಿತಿಯಲ್ಲಿ ಬೆಂದು ಬೆಳೆದ ಅನಸೂಯಮ್ಮ, ಚಿತಾಗಾರದ ಜಾಗದಲ್ಲೇ ಇರುವ ಮನೆಯೊಂದರಲ್ಲಿ ವಾಸವಾಗಿದ್ದಾಾರೆ. ಹಗಲು-ರಾತ್ರಿಿ ಎನ್ನದೆ ಶವ ಬರುವುದರಿಂದ ಬೇಸರವಿಲ್ಲದೆ ಅಂತ್ಯಕ್ರಿಿಯೆ ನಡೆಸಿಕೊಡುತ್ತಾಾರೆ. ಇವರಿಗೆ ತಮ್ಮ ಕೆಲಸದ ಬಗ್ಗೆೆ ಬೇಸರವಿಲ್ಲ. ಆತ್ಮತೃಪ್ತಿಿ ಇಲ್ಲಿ ದೊರೆತಿದೆ. ಹೊಟ್ಟೆೆಪಾಡಿಗೆ ಉದ್ಯೋೋಗ ಬೇಕು. ಅದು ಯಾವುದಾದರೇನು ಎನ್ನುವ ಅವರು, ಈಗ ಚಿತಾಗಾರವನ್ನೇ ಪ್ರೀತಿಸುತ್ತಾಾರೆ. ಶವ ಸುಟ್ಟ ನಂತರ ಬರುವ ವಾಸನೆ, ಬೆಂಕಿಯ ಸೆಕೆಯನ್ನು ಸಹಿಸಿಕೊಂಡು ಅಭ್ಯಾಾಸವಾಗಿಬಿಟ್ಟಿಿದೆ. ಕೈಲಾದಷ್ಟು ದಿನ ಇಲ್ಲಿಯೇ ಕಾಲಕಳೆಯುತ್ತೇನೆ ಎನ್ನುತ್ತಾಾರೆ. 
ಇವರ ಮೂಲ ಊರಿನಲ್ಲಿ ಸಂಬಂಧಿಕರು ಇದ್ದಾಾರೆ. ಅನಸೂಯಮ್ಮ ವರ್ಚಕ್ಕೊೊಂದು- ಎರಡು ಬಾರಿ ಹೋಗಿ ಬರುತ್ತಾಾರೆ. ಆದರೆ ಅವರ್ಯಾಾರೂ ಇವರನ್ನು ಅಷ್ಟೊೊಂದು ಚೆನ್ನಾಾಗಿ ಕಾಣುತ್ತಿಿಲ್ಲ. ಏಕೆಂದರೆ ಇವರು ಮಾಡುವ ವೃತ್ತಿಿ ಅವಮಾನದ್ದು ಎಂದು ಅವರು ಭಾವಿಸಿದ್ದಾಾರಂತೆ.
ರೋಟರಿಯಿಂದ ತಿಂಗಳ ಸಂಬಳವಿದೆ. ಜೊತೆಗೆ ಹೆಣದ ಅಂತ್ಯಕ್ರಿಿಯೆಗೆ ಬರುವವರೂ ಸಹ ಮಾನವೀಯತೆಯಿಂದ ಅಲ್ಪಸ್ವಲ್ಪ  ಹಣ ಕೊಡುತ್ತಾಾರೆ. ಇದರಿಂದಲೇ ನೆಮ್ಮದಿಯ ಬದುಕು ಸಾಗಿಸುತ್ತಿಿದ್ದಾಾರೆ. ಇವರ ಕೆಲಸ-ಕಾರ್ಯ ಗಮನಿಸಿ ಅನೇಕ ಸಂಘ-ಸಂಸ್ಥೆೆಗಳು ಗೌರವಿಸಿವೆ. 
10.3. 18
       ....................................


No comments:

Post a Comment