Wednesday 18 April 2018

ಹಿಂದೂಸ್ಥಾಾನಿ ಪ್ರತಿಭೆ.
ನಿಶಾದ್ ಹರ್ಲಾಪುರ್ 

ಹಿಂದೂಸ್ಥಾಾನಿ  ಸಂಗೀತದಲ್ಲಿ ಶಿವಮೊಗ್ಗದ  ಯುವ ಗಾಯಕ ನಿಶಾದ್ ಹರ್ಲಾಪುರ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿಿರುವ ಪ್ರತಿಭೆ. ಇತ್ತೀಚಿನ ಯುವ ಸಂಗೀತಗಾರರಲ್ಲಿ ಅದರಲ್ಲೂ ಪದ್ಮಭೂಷಣ ಪುಟ್ಟರಾಜ ಗವಾಯಿಗಳ ಶಿಷ್ಯ ಪರಂಪರೆಯಲ್ಲೇ ಬೆಳೆದು ಬಂದ  ಇವರು, ಗ್ವಾಾಲಿಯರ್ ಘರಾಣಾದಲ್ಲಿ ಶ್ರೇಷ್ಠ ಗಾಯಕರಾಗಿದ್ದಾಾರೆ.
ನಿಶಾದ್‌ಗೆ ತಂದೆ ಹುಮಾಯುನ್ ಹರ್ಲಾಪುರ್ ಅವರೇ ಗುರು. ಚಿಕ್ಕಂದಿನಿಂದಲೂ ಸಂಗೀತದ ಗೀಳು ಹತ್ತಿಿಸಿಕೊಂಡಿದ್ದರಿಂದ 6 ವರ್ಷದ ನಂತರ ತಂದೆಯೇ ಗುರುವಾದರು. 8ನೆಯ ವರ್ಷದಲ್ಲಿ ಧಾರವಾಡದಲ್ಲಿ ಪ್ರಪ್ರಥಮ ಸಂಗೀತ ಕಛೇರಿ ನಡೆಸಿದರು. ಸಂಗೀತವನ್ನು ಕಲಿಯುತ್ತಲೇ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪ್ರಶಸ್ತಿಿ-ಪುರಸ್ಕಾಾರಗಳಿಗೆ ಭಾಜನರಾಗುತ್ತಾಾ ಸಾಗುತ್ತಿಿದ್ದಾಾರೆ. ಇವರ ಪ್ರತಿಭೆಯನ್ನು ಅಂತಾರಾಷ್ಟ್ರೀಯ ಹಿಂದೂಸ್ಥಾಾನಿ ದಿಗ್ಗಜರೇ ನೋಡಿ ಬೆರಗಾಗಿದ್ದಾಾರೆ.
 ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಟಾಟಾ ಕ್ಯಾಾಪಿಟಲ್ ಹಾಗೂ ಆರ್ಟ್ ಬಂಧು ಸಂಸ್ಥೆೆಗಳ ಸಹಯೋಗದಲ್ಲಿ ದೇಶದ ಶ್ರೇಷ್ಠ ಬಾನ್ಸುರಿ ಹಾಗೂ ಕೊಳಲು ವಾದಕ ಪ್ರವೀಣ್ ಗೋಡ್ಖಿಿಂಡಿ ಅವರ ’ಸಂಜೋಗ್ ಚಾರಿಟೇಬಲ್ ಟ್ರಸ್‌ಟ್‌’ ಆಯೋಜಿಸಿದ್ದ ’ಸ್ವರಶ್ರೀ’ ಹಿಂದೂಸ್ಥಾಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಆಯ್ಕೆೆಯಾಗಿ ’ಸ್ವರಶ್ರೀ’ ಪುರಸ್ಕಾಾರಕ್ಕೆೆ ಭಾಜನರಾಗಿದ್ದಾಾರೆ. ಫೆಬ್ರವರಿ 10 ಮತ್ತು 11 ರಂದು ಬೆಂಗಳೂರಿನ ಜ್ಞಾಾನಜ್ಯೋೋತಿ ಸಭಾಂಗಣದಲ್ಲಿ ನಡೆಯುವ ದಕ್ಷಿಣ ಬೃಂದಾವನ್ ಸಂಗೀತ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಸಿತಾರ್ ವಾದಕ ಉಸ್ತಾಾದ್ ಶಾಹಿದ್ ಪರ್ವೇಜ್ ಖಾನ್ ಮತ್ತು ದೇಶದ ಶ್ರೇಷ್ಠ ತಬಲಾ ವಾದಕ ಯೋಗೀಶ್ ಸಂಶಿ ಇವರಿಂದ ಸ್ವರಶ್ರೀ ಪುರಸ್ಕಾಾರವನ್ನು ಸ್ವೀಕರಿಸಲಿದ್ದಾಾರೆ.
 ನಿಶಾದ್  ಹಿಂದೂಸ್ಥಾಾನಿ ಸಂಗೀತ ಮತ್ತು ಲಘುಸಂಗಿತದಲ್ಲಿ ಆಕಾಶವಾಣಿಯ ಬಿ ಗ್ರೇಡ್ ಕಲಾವಿದರಾಗಿದ್ದಾಾರೆ. ಸಾಕಷ್ಟು ಹಿರಿಯ ಗಾಯಕರೊಡನೆ ಸಹಗಾಯನ ನಡೆಸಿದ್ದಾಾರೆ. ಈವರೆಗೆ 500ಕ್ಕೂ ಹೆಚ್ಚು ಸಂಗೀತ ಕಛೇರಿ ನಡೆಸಿಕೊಟ್ಟಿಿದ್ದಾಾರೆ. 2016ರ ಜನವರಿಯಲ್ಲಿ ಗುಜರಾತ್‌ನ ಭರೂಚ್‌ನಲ್ಲಿ ನಡೆದ ಅಂತಃಸ್ವರ ಸಂಗೀತ ಸಮಾರೋಹದಲ್ಲಿ ಅಂತಾರಾಷ್ಟ್ರೀಯ ಗಾಯಕರಾದ ರಾಜನ್ ಮಿಸ್ರಾಾ, ಸಾಜನ್ ಮಿಶ್ರಾಾ ಅವರೆದುರು ಸಂಗೀತ ಕಾರ್ಯಕ್ರಮ ನೀಡಿ ಅವರಿಂದ ಅಂತಃಸ್ವರ ಸಂಗೀತ ಪ್ರಬುದ್ಧ ಪ್ರಶಸ್ತಿಿಯನ್ನು ಪಡೆದುಕೊಂಡಿದ್ದಾಾರೆ.
ಪ್ರಸ್ತುತ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವ ನಿಶಾದ್, ಈಗ ವಿದ್ವತ್ ಪರೀಕ್ಷೆಗೆ ಸಜ್ಜಾಾಗುತ್ತಿಿದ್ದಾಾರೆ. ಶಿಕ್ಷಣ ಇಲಾಖೆ ನಡೆಸುವ ಪ್ರತಿಭಾ ಕಾರಂಜಿಯಲ್ಲಿ ಹಿಂದೂಸ್ಥಾಾನಿ ಶಾಸ್ತ್ರೀಯ ಸಂಗೀತ,  ಭಾವಗೀತೆ, ಭಕ್ತಿಿಗೀತೆಗಳಲ್ಲಿ ಪ್ರಥಮ ಸ್ಥಾಾನ ಗಳಿಸಿದ್ದಾಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾಪ್ರತಿಭೋತ್ಸವದಲ್ಲಿ ಹಿಂದೂಸ್ಥಾಾನಿ ಸಂಗೀತದಲ್ಲಿ ರಾಜ್ಯಕ್ಕೆೆ ಮೊದಲಿಗರಾಗಿದ್ದಾಾರೆ. ಕರ್ನಾಟಕ ಸಂಗೀತ ಅಕಾಡೆಮಿಯಿಂದ 2014-15ರ ಸಾಲಿನ ಶಿಷ್ಯವೇತನಕ್ಕೆೆ ಇವರು ಭಾಜನರಾಗಿದ್ದಾಾರೆ.
ಕ್ಲಾಾಸಿಕಲ್ ವಾಯ್‌ಸ್‌ ಆಫ್ ಬೆಂಗಳೂರು ಪ್ರಶಸ್ತಿಿ ಮತ್ತು ಲಖ್ನೋೋದಲ್ಲಿ ನಡೆದ ಅಂತಾರಾಷ್ಟ್ರೀಯ ಸಂಗೀತ ಸ್ಪರ್ಧೆಯಲ್ಲಿ ಸಂಗೀತ ಮಿಲನ್ ಪ್ರಶಸ್ತಿಿ ಪಡೆದಿದ್ದಾಾರೆ. ಮೊನ್ನೆೆಯಷ್ಟೇ ಸ್ವರಶ್ರೀ ಪುರಸ್ಕಾಾರಕ್ಕೆೆ ಆಯ್ಕೆೆಯಾಗಿದ್ದಾಾರೆ.
ಇವರು ದೇಶದ ಖ್ಯಾಾತ ಗಾಯಕರಾದ ವೆಂಕಟೇಶ್‌ಕುಮಾರ್, ಸೋಮನಾಥ ಮರಡೂರು, ಇಂದೂಧರ ನಿರೋಡಿ, ಜಯತೀರ್ಥ ಮೇವುಂಡಿ, ಕುಮಾರದಾಸ್, ಉಸ್ತಾಾದ್ ಹುಮಾಯುನ್ ಹರ್ಲಾಪುರ್ ಇವರೊಡನೆ ಗಾನದ ಜೊತೆಗೆ ಸಹಗಾಯನ ನೀಡಿ ಪ್ರಶಂಸೆ ಪಡೆದಿದ್ದಾಾರೆ. 
10.2.18
,,,,,,,,,,,,,,,,,,,,,,,

No comments:

Post a Comment