Wednesday 18 April 2018

 ಎವರೆಸ್‌ಟ್‌ ಧೀರೆ
ಮಾನಸಾ


ಈ ಜಗತ್ತಿಿನಲ್ಲಿ ಮಹಾನ್ ವ್ಯಕ್ತಿಿಗಳಾಗಿ ಯಾರೂ ಹುಟ್ಟಿಿಲ್ಲ. ಮಹಾನ್ ಸವಾಲುಗಳನ್ನು  ಎದುರಿಸಿ ಅವರೆಲ್ಲ ಮಹಾನ್ ವ್ಯಕ್ತಿಿಗಳಾಗಿದ್ದಾಾರೆ ಎಂಬ ಮಾತಿದೆ. ಸಕಾರಾತ್ಮಕವಾಗಿ ನಾವು ಯೋಚಿಸಿದಲ್ಲಿ ಬಲಿಷ್ಠ ವಿಚಾರಗಳು ನಮ್ಮೆೆದುರು ಬರುತ್ತವೆ. ಇದರಿಂದ ಅಸಾಧ್ಯ ಎಂದುಕೊಂಡಿದ್ದನ್ನೆೆಲ್ಲ ಸಾಧಿಸಲು ಶಕ್ಯವಾಗುತ್ತದೆ.
ಸಾಗರದ ಯುವತಿ ಮಾನಸಾ ಅಸಾಧ್ಯ ಎನ್ನುವ ಸಾಧನೆ ಮಾಡಿದ್ದಾಾಳೆ. ಅದೆಂದರೆ, ಚಳಿಗಾಲದಲ್ಲಿ ಅಂದರೆ ಮೈನಸ್ 26 ಡಿಗ್ರಿಿಯಲ್ಲಿ ಯಶಸ್ವಿಿಯಾಗಿ ಮೌಂಟ್ ಎವರೆಸ್‌ಟ್‌ ಬೇಸ್ ಕ್ಯಾಾಂಪ್ 18500 ಅಡಿ ತಲುಪಿ ಬಂದಿದ್ದಾಾಳೆ. ಈ ಸಾಹಸ ಮಾಡಿದ  ಭಾರತದ ಏಕೈಕ ಕುಮಾರಿಯಾಗಿ ಎಲ್ಲರ ಪ್ರಶಂಸೆಗೊಳಗಾಗಿದ್ದಾಾಳೆ.
ನೇಪಾಳದ ಅಡ್ವೆೆಂಚರ್ ನೇಚರ್ ಕ್ಯಾಾಂಪ್ ಏರ್ಪಡಿಸಿದ್ದ ಮೌಂಟ್ ಎವರೆಸ್‌ಟ್‌ ಬೇಸ್ ಕ್ಯಾಾಂಪ್ ಚಾರಣಕ್ಕೆೆ ಆಯ್ಕೆೆಯಾಗಿದ್ದ ಮಾನಸಾ ಡಿ. 17ರಂದು ತೆರಳಿ 30ಕ್ಕೆೆ ವಾಪಸಾಗಿದ್ದಾಾಳೆ. ಡಿ. 25 ರ ಕ್ರಿಿಸ್‌ಮಸ್  ದಿನ  28 ಕಿ.ಮೀ. ಚಲಿಸಿ ಬೇಸ್ ಕ್ಯಾಾಂಪ್ ಸಮಿಟ್ ಮಾಡಿ ಸುಮಾರು 18500 ಅಡಿ ಕ್ರಮಿಸಿ ದೇಶದ ತ್ರಿಿವರ್ಣ ಧ್ವಜವನ್ನು ಹಾರಿಸಿರುತ್ತಾಾರೆ. ಈ ಬಾರಿ ಭಾರತದಿಂದ ಚಳಿಗಾಲದ ಈ ಚಾರಣದಲ್ಲಿ ಭಾಗವಹಿಸಿ ಯಶಸ್ವಿಿಯಾದ ಯುವತಿ  ಮಾನಸಾ ಮಾತ್ರ ಎನ್ನುವುದು ವಿಶೇಷ.
ಅವಳ ಚಾರಣಕ್ಕೆೆ ಸಹಕಾರ ನೀಡಿದವರು ಬೆಂಗಳೂರಿನ ಕೇಂದ್ರ ಕಚೇರಿಯ ಟಿ.ವಿ.9 ಆಡಳಿತ ಮಂಡಳಿ, ಜೋಷಿ ಫೌಂಡೇಷನಿನ ದಿನೇಶ್‌ಕುಮಾರ್ ಎನ್. ಜೋಷಿ ಮತ್ತು ಕುಟುಂಬ ವರ್ಗ ಹಾಗೂ ಶಿವಮೊಗ್ಗ ನಗರ ಶಾಸಕ ಶಾಸಕ ಕೆ.ಬಿ. ಪ್ರಸನ್ನಕುಮಾರ್. ಇವಳು ಯೂತ್ ಹಾಸ್ಟೆೆಲ್‌ಸ್‌ ಅಸೋಸಿಯೇಷನ್ ಆಫ್ ಇಂಡಿಯಾ, ಶಿವಮೊಗ್ಗ ತರುಣೋದಯ ಘಟಕದ ಆಜೀವ ಸದಸ್ಯಳಾಗಿದ್ದಾಾಳೆ. ಶಿವಮೊಗ್ಗದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿಯು ಇವಳ ಸಾಧನೆಯನ್ನು ಮೆಚ್ಚಿಿ ಆಜೀವ ಸದಸ್ಯತ್ವವನ್ನು ನೀಡಿ ಅಭಿನಂದಿಸಿದೆ.
ಸಾಗರದ ಮ.ಸ. ನಂಜುಂಡಸ್ವಾಾಮಿ ಮತ್ತು ಜ್ಯೋೋತಿ ಅವರ ಪುತ್ರಿಿಯಾದ ಮಾನಸಾ, ಎಲೆಕ್ಟ್ರಾಾನಿಕ್ ಮೀಡಿಯ ಜರ್ನಲಿಸಂನಲ್ಲಿ ಪದವಿ ಪಡೆದು ಪ್ರಸ್ತುತ ಬೆಂಗಳೂರಿನ ಟಿ.ವಿ.9ನಲ್ಲಿ ಕಾರ್ಯನಿರ್ವಹಿಸುತ್ತಿಿದ್ದಾಾಳೆ. ಸಮಾಜಸೆವೆಯಲ್ಲಿ ಅಪಾರ ಆಸಕ್ತಿಿ ಇರುವ ಮನಸಾ, ಸಾಗರದ ವಿಕಲಚೇತನ ಮಕ್ಕಳ ಶಾಲೆಯ ಚಿತ್ರಣವನ್ನು ಚಿತ್ರೀಕರಿಸಿ ವಾಟ್‌ಸ್‌‌ಅಪ್ ಮೂಲಕ ಹಾಗೂ ಯೂಟ್ಯೂಬ್ ಮೂಲಕ ಸಹಾಯಹಸ್ತ ನೀಡುವಂತೆ ಕೋರಲು ಬಳಸಿಕೊಂಡಳು. ತನ್ನ ಸ್ವಂತ ಹಣವನ್ನು ಈ ಚಿತ್ರೀಕರಣಕ್ಕೆೆ ಬಳಸಿದಳು. ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗುತ್ತಿಿದ್ದಂತೆ ದೇಶಾದ್ಯಂತ ಅನೇಕ ದಾನಿಗಳು ಈ ಶಾಲೆಯ ಮಕ್ಕಳ ನೆರವಿಗೆ ಧಾವಿಸಿದರು. ಕೆಲವೇ ದಿನದಲ್ಲಿ ರೂ. 70 ಸಾವಿರ ರೂ. ನೆರವು ಶಾಲೆಗೆ ದೊರಕಿಸಿಕೊಟ್ಟಿಿದ್ದಾಾಳೆ.
 2014ರಲ್ಲಿ ಕರ್ನಾಟಕದಿಂದ ಅತಿ ಚಿಕ್ಕವಯಸ್ಸಿಿನಲ್ಲೇ ಅತ್ಯಂತ ಕಠಿಣವಾದ ಕೈಲಾಸ ಮಾನಸ ಸರೋವರ ಯಾತ್ರೆೆಯನ್ನು ಮಾನಸಾ ತನ್ನ ತಾಯಿ ಜ್ಯೋೋತಿಯೊಂದಿಗೆ ಯಶ್ವಸಿಯಾಗಿ ಪೂರೈಸಿ ಅದರ ಅನುಭವವನ್ನು "ಮಾನಸ ಯಾತ್ರೆೆ" ಎಂಬ ಪುಸ್ತಕವನ್ನು ಸಹ ಹೊರತಂದಿದ್ದಾಾಳೆ. 2015ರಲ್ಲಿ ಅಮರನಾಥ ಮತ್ತು ವೈಷ್ಣೋೋದೇವಿ ಯಾತ್ರೆೆಯನ್ನು ಸಹ ಪೂರೈಸಿ ಅದರ ಅನುಭವವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾಾಳೆ.
ಮಾನಸಾ ಓರ್ವ ಸಂಗೀತಾರಾಧಾಕಿ, ಬಾಲ್ಯದಲ್ಲಿ ಸಾಗರದ ಸುಕನ್ಯಾಾ ಜಿ. ಭಟ್ ಅವರಲ್ಲಿ ಸುಗಮ ಸಂಗೀತ ಅಭ್ಯಾಾಸ ಮಾಡಿ, ಆನಂತರ ಗುರುಗುಹದ ಶೃಂಗೇರಿ ಹೆಚ್.ಎಸ್. ನಾಗರಾಜ್ ಅವರಲ್ಲಿಯೂ ಹಾಗೂ ಅವರ ಶಿಷ್ಯೆೆಯಾದ ಅಮೃತಾ ಅವರಲ್ಲಿ ಕರ್ನಾಟಕ ಸಂಗೀತವನ್ನು ಕಲಿತು, ಸೀನಿಯರ್ ಅಭ್ಯಾಾಸವನ್ನು ಮುಗಿಸಿ, ವಿದ್ವತ್ ಅಧ್ಯಯನವನ್ನು ನಡೆಸುತ್ತಿಿದ್ದಾಾಳೆ.
ಇವಳ ಸಾಧನೆಯನ್ನು ಗುರುತಿಸಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ "ಯಂಗ್ ಅಚೀವರ್ಸ್ 2016" ಅವಾರ್ಡನ್ನು ವಿಪ್ರ ವನಿತಾ ವೇದಿಕೆಯು ನೀಡಿ ಗೌರವಿಸಿದೆ. ಸಾಧಿಸುವ ಛಲವಿದ್ದರೆ ಸಮಾಜದ ಸಾವಿರ ದಾರಿಗಳು ಇವೆ. ಯುವ ಮನಸ್ಸು ಸಾಧನೆಗೆ ತೊಡಗಲು ಮಾನಸ ಮಾದರಿಯಲ್ಲವೆ?
published on  6. 1. 18
...........................

No comments:

Post a Comment