Wednesday 18 April 2018

ವಿದ್ಯಾಾರ್ಥಿಗಳಿಗೆ ಮಾದರಿ
ಪ್ರಗತಿ ನಿಲುವಾಸೆ

ಏಕಾಂತದಲ್ಲಿ ಕಠಿಣ ಅಭ್ಯಾಾಸ ಮಾಡಿದರೆ  ಯಶಸ್ಸು ಎನ್ನುವುದು ಸದ್ದು ಮಾಡುತ್ತದೆ ಎನ್ನುವ ಆಂಗ್ಲ ಮಾತಿದೆ. ನಮ್ಮ ಗುರಿಯನ್ನು ತಲುಪಲು ಸಂಯಮ, ಯೋಜನಾಬದ್ಧತೆ, ದೀರ್ಘಪ್ರಯತ್ನ ಮತ್ತು ನಿಶ್ಚಿಿತ ಉದ್ದೇಶ ಇಟ್ಟುಕೊಂಡು ಶ್ರಮಪಡಬೇಕು. ಆಗ ಯಶಸ್ಸು ಸಾಧ್ಯ.
ಪ್ರಗತಿ  ನಿಲುವಾಸೆ ಬಹುಮುಖ ಪ್ರತಿಭೆಯ ಖನಿ. ನಗರದ ಪಿಇಎಸ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾಾನಿಕ್‌ಸ್‌ ಮತ್ತು ಕಮ್ಯುನಿಕೇಶನ್ ಇಂಜಿನೀಯರಿಂಗ್‌ನ ಕೊನೆಯ ವರ್ಷದಲ್ಲಿ ಓದುತ್ತಿಿರುವ ಇವರು, ಅಸಾಧಾರಣ ಪ್ರತಿಭಾನ್ವಿಿತೆ. ಇಂಜಿನೀಯರಿಂಗ್ ವಿದ್ಯಾಾರ್ಥಿನಿಯಾಗಿದ್ದರೂ  ಹಾಡುಗಾರಿಕೆ, ಸಂಗೀತ, ಸಾಹಿತ್ಯ, ಶಿಕ್ಷಣದಲ್ಲಿ ವಿಶೇಷ ಸಾಧನೆಯನ್ನು ಮಾಡುತ್ತ ಒಂದಲ್ಲ ಒಂದು ಪ್ರಶಸ್ತಿಿಗೆ ಭಾಜನರಾಗುತ್ತಿಿದ್ದಾಾರೆ.
ಪ್ರಸ್ತುತ ಕೃಷಿ ಮತ್ತು ವೈಜ್ಞಾಾನಿಕ ನಂಬಿಕೆಗಳು ಎನ್ನುವ ಕುರಿತು ಮತ್ತು ಇತರೆ ಮೂರು ಪುಸ್ತಕ ಬರೆಯುತ್ತಿಿರುವ ಇವರು, ಸುಮಾರು 400ಕ್ಕೂ ಹೆಚ್ಚು ಕಾಯ
ರ್ಕ್ರಮಗಳನ್ನು ಸಂಗೀತ, ಸಾಹಿತ್ಯ, ಶಿಕ್ಷಣ ಕ್ಷೇತ್ರಕ್ಕೆೆ ಸಂಬಂಧಿಸಿದಂತೆ ವಿವಿಧ ಜಿಲ್ಲೆೆಗಳಲ್ಲಿ ನೀಡಿದ್ದಾಾರೆ. ಜೊತೆಗೆ ಆರಕ್ಕೂ ಅಧಿಕ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಪ್ರಶಸ್ತಿಿಗಳನ್ನು ತಮ್ಮದಾಗಿಸಿಕೊಂಡಿದ್ದಾಾರೆ. ನಿಖರ ಗುರಿಯೊಂದಿಗೆ ಹೆಚ್ಚು ಶ್ರಮದ ಮೂಲಕ ಸಾಧನೆ ಮಾಡುವುದನ್ನು ಇಷ್ಟಪಡುವ ಮನೋಭಾವ ಇವರದ್ದು. ಅತ್ಯಂತ ಸರಳ ಸ್ವಭಾವದ ಮೂಲಕ ಆಕರ್ಷಕ ವ್ಯಕ್ತಿಿತ್ವ ಬೆಳೆಸಿಕೊಂಡಿರುವುದಲ್ಲದೆ, ಇತರೆ ವಿದ್ಯಾಾರ್ಥಿಗಳಿಗೆ ಮಾದರಿಯಾಗಿ ನಿಲ್ಲುತ್ತಾಾರೆ.
 ತೀರ್ಥಹಳ್ಳಿಿ ತಾಲೂಕಿನ ಕುಗ್ರಾಾಮವಾದ ನಿಲುವಾಸೆ ಇವರ ಊರು. ಮೂಲಸೌಕರ್ಯಗಳಿಂದ ವಂಚಿತವಾದ ಈ ಗ್ರಾಾಮದಲ್ಲಿದ್ದುಕೊಂಡೇ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಮುಂದೆ ಬಂದವರು. ಎಸ್ಸೆೆಸ್ಸೆೆಲ್ಸಿಿಯಲ್ಲಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾಾನ ಗಳಿಸಿದ್ದಾಾರೆ. 2007ರಲ್ಲಿ ಭಗವದ್ಗೀತೆಯ ಎಲ್ಲ 700 ಶ್ಲೋೋಕಗಳನ್ನು ಸತತ ಮೂರುವರೆ ಗಂಟೆಗಳ ಕಾಲ ಶೃಂಗೇರಿ ಜಗದ್ಗುರುಗಳ ಎದುರು ಮಂಡಿಸಿ ನಗದು ಬಹುಮಾನ ಪಡೆದಿದ್ದಾಾರೆ. ಬಾಲಪ್ರತಿಭೆಯಾಗಿ ಹಾಡುಗಾರಿಕೆ, ಸಾಹಿತ್ಯದಲ್ಲಿ ಆಗಲೇ ಗುರುತಿಸಿಕೊಂಡು ಜನಮನಸೆಳೆದಿದ್ದರಿಂದ 2007ರಲ್ಲಿ ಅಸಾಧಾರಣ ಪ್ರತಿಭೆ ಎಂಬ ರಾಜ್ಯ ಪ್ರಶಸ್ತಿಿ ಪಡೆದಿದ್ದಾಾರೆ. ಮಕ್ಕಳ ಕಲ್ಯಾಾಣ ಇಲಾಖೆ ಸಹ ಇವರ ಬಾಲಸಾಹಿತ್ಯ  ಪ್ರತಿಭೆಗೆ ಮಾರು ಹೋಗಿ ನಗದು ಬಹುಮಾನ ಸಹಿತ ಪುರಸ್ಕರಿಸಿದೆ.
ಉಡುಪಿಯಲ್ಲಿ 2007ರಲ್ಲಿ ಜರುಗಿದ 74ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ವರಚಿತ ಕವನ ವಚನ ಮತ್ತು ಗಾಯನದಿಂದ ಎಲ್ಲರ ಮನಸೆಳೆದಿದ್ದಾಾರೆ. ಪುಟ್ಟ ಕವಯಿತ್ರಿಿ ಎಂಬ ಬಿರುದು ಅಂದೇ ಇವರಿಗೆ ದೊರೆಯಿತು. ಇದರ ನಂತರ ಕಥೆ, ಕವನ ಬರೆಯುವ ಹವ್ಯಾಾಸ ಇನ್ನಷ್ಡು ಅಧಿಕವಾಯಿತು. ಮಕ್ಕಳೇ ನೀವೂ ಕವಿಗಳಾಗಬಹುದು, ನನ್ನ ದಿನಚರಿ, ನಿಲ್ಲುವಾಸೆ ಎಂಬ ಸಣ್ಣಕಥಾ ಸಂಕಲನ ಪ್ರಕಟವಾಗಿವೆ. 2010 ಮತ್ತು 2011ರ ರಲ್ಲಿ ಜರುಗಿದ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಕೀರ್ತಿಯೂ ಇವರದ್ದು.
ಈಟಿವಿ ಕನ್ನಡ ವಾಹಿನಿಯ ಎದೆ ತುಂಬಿ ಹಾಡುವೆನು, ಝೀ ಟಿವಿಯ ಸರಿಗಮಪ, ಉದಯ ವಾಹಿನಿಯ ಹಾಡು ಬಾ ಕೋಗಿಲೆ, ಸುವರ್ಣ ವಾಹಿನಿಯ ಲಿಟ್‌ಲ್‌ ಸ್ಟಾಾರ್ ಸಿಂಗರ್, ಚಂದನದ ಮಧುರ ಮಧುರವೀ ಮಂಜುಳಗಾನದಲ್ಲಿ ಭಾಗವಹಿಸಿ ತಮ್ನ ಪ್ರತಿಭೆಗಾಗಿ ಎಸ್ ಪಿ ಬಾಲಸುಬ್ರಹ್ಮಣ್ಯಂ, ಹಂಸಲೇಖ, ರಾಜೇಶ್ ಕೃಷ್ಣನ್, ಮಂಜುಳಾ ಗುರುರಾಜ್ ಅವರ ಪ್ರಶಂಸೆಗೆ  ಪಾತ್ರರಾಗಿದ್ದಾಾರೆ. ಚೆಸ್‌ನಲ್ಲೂ ರಾಜ್ಯಮಟ್ಟದವರೆಗೆ ಪ್ರಾಾತಿನಿಧ್ಯ ನೀಡಿದ್ದಾಾರೆ.
 ತಂದೆ ಕೃಷಿಕ ಪ್ರಸನ್ನಕುಮಾರ್ ಮತ್ತು ತಾಯಿ ಜ್ಯೋೋತಿ ಇವರೇ ತನಗೆ ಗುರುಗಳು. ತನ್ನೆೆಲ್ಲ ಚಟುವಟಿಕೆಗಳಿಗೆ ಸದಾ ನೀರೆರೆದು ಪ್ರೋತ್ಸಾಾಹಿಸಿದ್ದರಿಂದಲೇ ಇಂದು ಈ ಮಟ್ಟಕ್ಕೇರಲು ಕಾರಣವಾಗಿದೆ. ಇಂದಿಗೂ ಸಹ ಅವರೇ ಮಾರ್ಗದರ್ಶಕರು ಎಂದು ಹೃದಯತುಂಬಿ ಹೇಳುತ್ತಾಾರೆ ಹೆಸರಿಗೆ ತಕ್ಕಂತೆ ಇರುವ ಪ್ರಗತಿ. ಇಂಜಿನಿಯರಿಂಗ್ ಓದುತ್ತಿಿದ್ದರೂ ಸಾಹಿತ್ಯ, ಸಂಗೀತದ ಗೀಳು ಮುಂದುವರೆಸಿಕೊಂಡು ಹೋಗುತ್ತಿಿರುವುದು ನಿಜಕ್ಕೂ ಶ್ಲಾಾಘನೀಯ.
17.3.18
.....................................

No comments:

Post a Comment