Wednesday 18 April 2018

ಅಪರೂಪದ ಸಾಧಕ
ತುಕಾರಾಮ ರಂಗಧೋಳ್


ಜೀವನದಲ್ಲಿ ಸಾಧಿಸಬೇಕೆಂಬ ಛಲ ಇದ್ದರೆ ಮನುಷ್ಯ ಏನನ್ನಾಾದರೂ ಸಾಧಿಸುತ್ತಾಾನೆ. ಇರುವ ಅವಕಾಶವನ್ನೇ ಬಳಸಿಕೊಂಡು ಅದರಲ್ಲಿ ಹೆಸರು ಗಳಿಸುತ್ತ್ತಾಾನೆ. ಈ ಮೂಲಕ ಪ್ರಸಿದ್ಧಿಿ ಹೊಂದುತ್ತಾಾನೆ. ನಗರದ  ತಬಲಾ ವಾದಕ ತುಕಾರಾಮ್ ರಂಗಧೋಳ್ ಇಂತಹ ಒಬ್ಬ ಅಪರೂಪದ ಸಾಧಕ.
ತುಕಾರಾಮ್  49 ವರ್ಷಗಳಿಂದ ತಬಲಾ ವಾದನದ ಮೂಲಕ ಸಂಗೀತ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದವರು. ನಗರದಲ್ಲಿ ಬಹುತೇಕ ಯಾವ ಕಲಾವಿದನೂ ಈ ರೀತಿ ಸಾಧನೆ ಮಾಡಿದ ಉದಾಹರಣೆ ಸಿಗಲಿಕ್ಕಿಿಲ್ಲ. ಇವರು ಸಾಥ್ ನೀಡದ ಹಿಂದೂಸ್ಥಾಾನಿ ಗಾಯಕರು ಮತ್ತು ಹಾಡುಗಾರರೇ ಇಲ್ಲ. ಜೊತೆಗೆ  ಇವರ ತಬಲಾ ವಾದನ ನಡೆಯದ  ರಾಜ್ಯದ ಉತ್ಸವ, ಸಂಗೀತ ಕಾರ್ಯಕ್ರಮವಿಲ್ಲ  ಎಂದರೆ ಅತಿಶಯೋಕ್ತಿಿ ಏನಲ್ಲ.  5  ದಶಕದಿಂದ ಸಂಗೀತ ಕ್ಷೇತ್ರಕ್ಕೆೆ ತಮ್ಮನ್ನು ಸಮರ್ಪಿಸಿಕೊಂಡ ಅಪರೂಪದ ಕಲಾವಿದ ಇವರು.
ದರ್ಜಿ ವೃತ್ತಿಿ ಕುಟುಂಬ ಇವರದ್ದಾಾದರೂ ಆ ವೃತ್ತಿಿಯಲ್ಲಿ ಅಷ್ಟೇನೂ ಯಶಸ್ಸು ಕಾಣದ್ದರಿಂದ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಲು ನಿರ್ಧರಿಸಿದರು. ಮನೆಯಲ್ಲಿ ನೆಲೆಸಿದ್ದ  ಸಂಗೀತ ಇವರನ್ನು ಆಕರ್ಷಿಸಿತು. ಇವರ ತಂದೆ ರಾಮಪ್ಪ ಭಜನಾ ಮಂಡಳಿಯನ್ನು ಸ್ಥಾಾಪಿಸಿ, ಅತ್ಯುತ್ತಮವಾಗಿ ಹಾಡುತ್ತಿಿದ್ದರು. ಜೊತೆಗೆ ಇವರ ಅಣ್ಣ  ಹನುಮಂತರಾವ್ ಉತ್ತಮ ತಬಲಾ ವಾದಕ. ಇವರಿಬ್ಬರ ನೆರಳಿನಲ್ಲಿ ಬೆಳೆದ ತುಕಾರಾಮ್ ಎರಡನ್ನೂ ಕಲಿತು ಈಗ ಬೇಡಿಕೆಯ ತಬಲಾ ವಾದಕರಾಗಿದ್ದಾಾರೆ. ಕಾರ್ಯಕ್ರಮ ಸಣ್ಣದಿರಲಿ, ದೊಡ್ಡದಿರಲಿ ತಮಗೆ ಆಹ್ವಾಾನ ಬಂದರೆ ನಿಶ್ಚಿಿತವಾಗಿಯೂ ತೆರಳಿ ತಬಲಾ ವಾದನ ಮಾಡುತ್ತಾಾರೆ.
ಪ್ರಚಾರ ಬಯಸದೆ, ತಾನಾಯಿತು, ತನ್ನ ಕೆಲಸವಾಯಿತು ಎಂದುಕೊಂಡ ಮೃದು ಸ್ವಭಾವದ, ಅಷ್ಟೇ ನಿಗರ್ವಿ  ತುಕಾರಾಮ್, ಪಿಯುಸಿ ವಿದ್ಯಾಾಭ್ಯಾಾಸದ ನಂತರ ಶಿಕ್ಷಣ ಕ್ಷೇತ್ರ ಬಿಟ್ಟು ತಬಲಾ ವಿದ್ವಾಾನ್ ಅಧ್ಯಯನ ಮಾಡಿ, ವಿಶಾರದ ಪರೀಕ್ಷೆ ಪಾಸು ಮಾಡಿದರು. ಆಕಾಶವಾಣಿಯ ಶಾಸ್ತ್ರೀಯ ಹಾಗೂ ಲಘುಸಂಗೀತ  ಪರೀಕ್ಷೆಯಲ್ಲಿ ಬಿ ಹೈಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾಾರೆ. ಅಲ್ಲಿಂದ ತಬಲಾ ಕ್ಷೇತ್ರದಲ್ಲಿ ಪಾರಮ್ಯ ಆರಂಭಿಸಿ ಇಂದಿನವರೆಗೆ  ಹಿಂದಿರುಗಿ ನೋಡಿಲ್ಲ. ಇವರ ವಿದ್ಯಾಾಗುರುಗಳು ಪಂಡಿತ್ ಸಂಗಮೇಶ್ವ್ವರ ಗವಾಯಿಗಳು, ಶೇಷಾದ್ರಿಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು. ಇಂತಹವರ ಗರಡಿಯಲ್ಲಿ ಬೆಳೆದ ಇವರು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಬಲಾ ಸಾಥ್ ನೀಡುವ ಮೂಲಕ ನಗರದ ಕೀರ್ತಿಯನ್ನು ಎತ್ತರಕ್ಕೇರಿಸಿದ್ದಾಾರೆ.
ಇವರು ಕಲಾವಿದರಾದ ಪುಟ್ಟರಾಜ ಗವಾಯಿಗಳು, ರಾಮರಾವ್ ನಾಯಕ್, ವಿನಾಯಕ ತೊರವಿ, ಇಂದೂಧರ ನಿರೋಡಿ, ಗಣಪತಿ ಭಟ್ಟ ಹಾಸಣಗಿ, ಶ್ಯಾಾಮಲಾ ಭಾವೆ, ಮಾಧವ ಗುಡಿ ಮೊದಲಾದವರ ಅಂತಾರಾಷ್ಟ್ರೀಯ ಕಲಾವಿದರಿಗೆ, ಸುಗಮ ಸಂಗೀತ ಕ್ಷೇತ್ರ್ರದಲ್ಲಿ ಸಿ. ಅಶ್ವಥ್, ಶಿವಮೊಗ್ಗ ಸುಬ್ಬಣ್ಣ, ಬಿ.ಕೆ. ಸುಮಿತ್ರಾಾ, ಪುತ್ತೂರು ನರಸಿಂಹ ನಾಯಕ್, ಬಿ. ಆರ್. ಛಾಯಾ, ಜಿ. ವಿ. ಅತ್ರಿಿ ಮೊದಲಾದವರಿಗೆ ಸಾಥ್ ನೀಡಿದ್ದಾಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯವರು ಇವರ ಸಾಧನೆ ಗಮನಿಸಿ ಅಭಿನಂದಿಸಿದ್ದಾಾರೆ ವಿವಿಧ ಸಂಘ-ಸಂಸ್ಥೆೆಗಳಿಂದಲೂ ಸನ್ಮಾಾನಕ್ಕೆೆ ಭಾಜನರಾಗಿದ್ದಾಾರೆ. ಕರ್ನಾಟಕದ ಎಲ್ಲಾಾ ಆಕಾಶವಾಣಿ ಕೇಂದ್ರಗಳಲ್ಲೂ, ಖಾಗಿ ಟಿವಿ ಚಾನೆಲ್‌ಗಳಲ್ಲೂ, ದೂರದರ್ಶನದಲ್ಲೂ  ಇವರು ತಬಲಾ ಸಾಥ್ ನೀಡಿದ್ದಾಾರೆ.
ತಮ್ಮ  ಮನೆಯಲ್ಲೇ ಸೌಮ್ಯಾಾ ರೆಕಾರ್ಡಿಂಗ್ ಕೇಂದ್ರವನ್ನು ತೆರೆದು, ಹಲವಾರು ಧ್ವನಿಮುದ್ರಿಿಕೆಗಳನ್ನು ಬಿಡುಗಡೆ ಮಾಡಿದ್ದಾಾರೆ. ಈ ಪೈಕಿ ಮರಾಠಿ ಅಭಂಗ್ ಧ್ವನಿಮುದ್ರಿಿಕೆಗಳು ಇಂದಿಗೂ ಜನಪ್ರಿಿಯವಾಗಿವೆ. ಎಂಬಿಎ ಮುಗಿಸಿ ಸಂಗೀತ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿಿರುವ ಮಗ ವಿಠಲ್‌ರಾವ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಿಿದ್ದಾಾನೆ.
.............................................................

No comments:

Post a Comment