Saturday 6 January 2018

ಪ್ರತಿಫಲ ಬಯಸದ ಕಾಯಕಯೋಗಿ 
ದುಮ್ಮಿ ಬಸವಲಿಂಗಪ್ಪ


‘ಕರ್ಮಣ್ಯೆ ವಾಧಿಕಾರಸ್ಥೆ ಮಾ ಫಲೇಷು ಕದಾಚನ’ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಆದರೆ, ತಾವು ಮಾಡಿದ ಕೆಲಸಕ್ಕಿಂತ ಎರಡುಪಟ್ಟು ಫಲವನ್ನು ಜಾಸ್ತಿ ಬಯಸುವವರೇ ಹೆಚ್ಚಿರುವ ಈ ಜಗತ್ತಿನಲ್ಲಿ  ನಿಸ್ಪಹ ಸೇವೆ ಮರೀಚಿಕೆಯಾಗುತ್ತಿದೆ. ಅಂತಹವರ ಮಧ್ಯೆಯೂ ಶ್ರೀಕೃಷ್ಣನ ಮಾತಿನ ಪ್ರಕಾರವೇ ನಡೆಯುವ ಕಾಯಕಯೋಗಿಯೊಬ್ಬರು ಶಿವಮೊಗ್ಗದಲ್ಲಿದ್ದಾರೆ. ಅವರೇ ದುಮ್ಮಿ ಬಸವಲಿಂಗಪ್ಪ.
ಬಸವಲಿಂಗಪ್ಪ ಅವರು ಮಾಡುವ ಕೆಲಸವೆಂದರೆ, ಸರಕಾರಿ ಕಚೇರಿಗಳ ಮುಂದೆ ಮುಂಜಾನೆಯ ಕಸ ಹೊಡೆದು ಶುಚಿಗೊಳಿಸುವುದು. ಎರಡುವರೆ ವರ್ಷಗಳಿಂದ ಈ ಕಾಯಕವನ್ನು ತಪ್ಪದೆ ಮಾಡಿಕೊಂಡು ಬರುತ್ತಿದ್ದಾರೆ. ಮಳೆ, ಇರಲಿ, ಚಳಿ ಇರಲಿ ಬೆಳಿಗ್ಗೆ 6 ಗಂಟೆಗೆ ತಾಲೂಕು ಕಚೇರಿ ಎದುರು ಹಾಜರಿರುತ್ತಾರೆ. ಅಲ್ಲಿಂದ ಕಸ ಹೊಡೆದು ಅವುಗಳನ್ನು ಎತ್ತಿಹಾಕುವ ಕೆಲಸಕ್ಕೆ ನಾಂದಿ ಹಾಡುತ್ತಾರೆ. ಕೇವಲ ತಾಲೂಕು ಕಚೇರಿ ಒಂದೇ ಅಲ್ಲ, ಅಲ್ಲಿಂದ ಜಿಲ್ಲಾ ನ್ಯಾಯಾಲಯ ಸಂಕೀರ್ಣ, ಜಿಲ್ಲಾಧಿಕಾರಿ ಕಚೇರಿ ಆವರಣ, ಜಯನಗರ ಪೊಲೀಸ್ ಠಾಣೆ ಮತ್ತು ಪಕ್ಕದಲ್ಲಿರುವ ಅಂಚೆ ಕಚೇರಿ ಆವರಣ, ಆರ್‌ಟಿಓ ಅವರಣ, ತಾಪಂ ಕಚೇರಿ, ಜಲಮಂಡಳಿ ಆವರಣದವರೆಗೆ ಸಾಗುತ್ತದೆ. ಈ ನಾಲ್ಕಾರು ಕಚೇರಿ ಎದುರು ಕಸ ತೆಗೆದು ಮುಗಿಸುವವರೆಗೆ ಸುಮಾರು ಎರಡೂವರೆ ಗಂಟೆ ತಗಲುತ್ತದೆ. ಅಲ್ಲಿಗೆ ಪ್ರತಿದಿನದ ಸ್ವಚ್ಛತಾ ಅಭಿಯಾನವನ್ನು ಮುಗಿಸುತ್ತಾರೆ. 
ನಂತರ ಮನೆಗೆ ತೆರಳಿ ದಿನನಿತ್ಯದ ಕೆಲಸ ಮುಗಿಸಿ ಮತ್ತೆ 10 ಗಂಟೆಗೆ ತಮ್ಮ ಉದ್ಯೋಗಕ್ಕೆ ಕಾಲಿಡುತ್ತಾರೆ. ಇವರ ಉದ್ಯೋಗವೆಂದರೆ ಛಾಪಾ ಕಾಗದವನ್ನು ನ್ಯಾಯಾಲಯ, ತಾಲೂಕು ಕಚೇರಿ, ಆರ್‌ಟಿಓ ಮೊದಲಾದೆಡೆ ಕೆಲಸ ಮಾಡುವವರಿಗೆ, ವಕೀಲರಿಗೆ, ಅಧಿಕಾರಿಗಳಿಗೆ ತಲುಪಿಸುವುದು. ಇದರಲ್ಲೇ ದಿನನಿತ್ಯ ಕಾಸು ಸಂಪಾದಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇವರ ಈ ಸೇವೆ ಗಮನಿಸಿ ಹಲವು ಸಂಘಟನೆಯವರು ಗೌರವಿಸಿವೆ. ಶ್ರೀಗಂಧ ಸಂಸ್ಥೆಯವರು ಇತ್ತೀಚೆಗೆ ಸಂಸ್ಥೆಯ ಕಾಂರ್ಕ್ರಮದಲ್ಲಿ ಗೌರವಿಸಿ ಸ್ವಚ್ಛ ಭಾರತ ಅಭಿಯಾನದ ಪ್ರೇರಕ ಶಕ್ತಿ ಎಂಬ ಬಿರುದು ನೀಡಿದ್ದಾರೆ. ಪ್ರತಿಧ್ವನಿ  ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಮತ್ತಿತರರು ಬಸವಲಿಂಗಪ್ಪ ಅವರ ಸಾಧನೆಯನ್ನು ಮೊದಲು ಗುರುತಿಸಿದವರು. ಅವರೂ ಸಹ ಇತ್ತೀಚೆಗೆ ಸನ್ಮಾನಿಸಿದ್ದಾರೆ. ರೋಟರಿ, ಪೋಸ್ಟ್ ಆಫೀಸ್‌ನವರೂ ಗೌರವಿಸಿದ್ದಾರೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ. ಎಸ್. ಈಶ್ವರಪ್ಪನವರು ಸಾಂಸದ ಪ್ರಹ್ಲಾದ್ ಜೋಶಿ ಅವರಿಂದ ಸನ್ಮಾನಿಸಿದ್ದಾರೆ.
ಬಸವಲಿಂಗಪ್ಪ ತಾವು ಮಾಡಿದ ಸೇವೆಗೆ ಯಾರಿಂದದಲೂ ಒಂದು ರೂಪಾಯಿ ಪಡೆಯುವುದಿಲ್ಲ. ‘ಬನ್ನಿ, ಚಹಾ ಕುಡಿಯೋಣ’ ಎಂದು ಕರೆದರೂ ಹೋಗುವುದಿಲ್ಲ. ಕೆಲವು ಹಿರಿಯ ಅಧಿಕಾರಿಗಳು ಇವರ ದೈನಂದಿನ ಕಾಯಕವನ್ನು ಕಂಡು ಮನಸಾರೆ ಶ್ಲಾಘಿಸಿದ್ದಾರೆ. ದಿನವೂ ಬೆಳಿಗ್ಗೆ ವಾಕ್ ಬರುವ  ನೂರಾರು ಮಂದಿ ಇವರನ್ನು ಮಾತನಾಡಿಸಿಯೇ ಮುಂದೆ ಸಾಗುತ್ತಾರೆ. ಆದರೆ, ತಾವು ಮಾಡಿದ ಕಾರ್ಯದ ಬಗ್ಗೆ ಎಲ್ಲಿಯೂ ಪ್ರಚಾರ ಮಾಡಿಕೊಂಡಿಲ್ಲ.
ಬಸವಲಿಂಗಪ್ಪ ಮೂಲತಃ ಹಾರ್ನಳ್ಳಿಯವರು. ಇವರ ತಂದೆ ವಿರೂಪಣ್ಣನವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸದ್ಯ ಶಿವಮೊಗ್ಗದ ಕಾಶಿಪುರದಲ್ಲಿ ನೆಲೆಸಿದ್ದಾರೆ. ಇವರಿಗೆ ಒಬ್ಬ ಮಗ, ಒಬ್ಬ ಮಗಳಿದ್ದು, ಇಬ್ಬರಿಗೂ ಉನ್ನತ ವ್ಯಾಸಂಗ ಮಾಡಿಸಿದ್ದಾರೆ. ತಮ್ಮ ತಂದೆ ಮನೆ ಮತ್ತು ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಬಾಲ್ಯದಲ್ಲೇ ಕಲಿಸಿದ್ದರು. ಎಲ್ಲಿ ಕಸ ಬಿದ್ದರೂ ಅದನ್ನು ಹೆಕ್ಕುತ್ತಿದ್ದರು. ಅದೇ ಶಿಸ್ತು, ಸಂಸಕ್ರತಿಯನ್ನು ತಾನು ಮೈಗೂಡಿಸಿಕೊಂಡಿದ್ದೇನೆ. ಯಾವ ಫಲಾಪೇಕ್ಷೆಯೂ ತನಗಿಲ್ಲ. ಇದರಿಂದಲೇ  ಸಂತೃಪ್ತನಾಗಿದ್ದಾನೆ ಎನ್ನುತ್ತಾರೆ. 
 ಸಾರ್ವತ್ರಿಕ ರಜೆ ಇದ್ದ ದಿನ ಅರ್ಧ ದಿನವನ್ನು ಈ ಕಾಯಕಕ್ಕೆ  ಬಳಸುತ್ತಾರೆ. ಕಾಶೀಪುರದಿಂದ ದಿನವೂ ಸೈಕಲ್‌ನಲ್ಲೇ ಬಂದು ಹೋಗುವ ಬಸವಲಿಂಗಪ್ಪ, ಮಳೆಗಾಲ ಆರಂಭವಾಗುವ ವೇಳೆ ಈ ಕಚೇರಿಗಳ ಎದುರು ನೂರಾರು ಗಿಡಗಳನ್ನು ಹಾಕಿ ಅವುಗಳನ್ನು ಸಲುಹುವ ಯೋಜನೆ ಹಾಕಿಕೊಂಡಿದ್ದಾರೆ. ಯಾರ ಹಂಗಿಲ್ಲದೆ, ಸಮಾಜ ಸೇವೆಯನ್ನು ಹೇಗೆ ಮಾಡಬಹುದೆನ್ನುವುದಕ್ಕೆ ಇಂದಿನ ಯುವಕರಿಗೆ ಬಸವಲಿಂಗಪ್ಪ ಮಾದರಿಯಾಗಿದ್ದ

No comments:

Post a Comment