Tuesday 9 January 2018

ಕಷ್ಟಗಳ ಮಳೆಯಲ್ಲಿ ಮೇಲೆದ್ದ 
 ರಾಜೇಶ್

ಮನುಷ್ಯ ಸತತ ಪ್ರಯತ್ನಪಟ್ಟರೆ ಮಾತ್ರ ಸಾಧನೆ ಸಾಧ್ಯ. ಅದಕ್ಕಾಗಿಯೇ ಒಂದು ಮಾತಿದೆ. ಬಾಳೊಂದು ಹೋರಾಟ ಎಂದು. ತನ್ನ ಜೀವನದಲ್ಲಿ ಸಾಧನೆ ಮಾಡಲು, ಉತ್ತಮ ಸ್ಥಿತಿ ತಲುಪಲು, ಸ್ವಂತ ಕಾಲಮೇಲೆ ನಿಲ್ಲಲು ಸಾಕಷ್ಟು ಯತ್ನ ಮಾಡಬೇಕಾಗುತ್ತದೆ. ಹೀಗೆ ಕಷ್ಟದ ಹಾದಿಯಿಂದ ಮೇಲೆದ್ದು ಬಂದವರು ಮಾತ್ರ ನಿಜವಾದ ಸಾಧಕರಾಗುತ್ತಾರೆ.
ನಗರದ ಗೋಪಾಳಗೌಡ ಬಡಾವಣೆಯ ಮುಖ್ಯ ರಸ್ತೆಯಲ್ಲಿರುವ ಎಸ್‌ಬಿಎಂ ಮೇಲ್ಗಡೆ  ಫಿಟ್ನೆಸ್  ಪಾಯಿಂಟ್ ಎಂಬ ಜಿಮ್ ಇದೆ. ಅದರ ಮಾಲಕರಾಗಿರುವ ರಾಜೇಶ್ ತನ್ನ  ಹೋರಾಟದ  ಜೀವನದ ಮೂಲಕವೇ ಇದನ್ನು ಸ್ಥಾಪಿಸಿದ್ದಾರೆ. ಮೆಟ್ರೊ ನಗರದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳ ಜಿಮ್ ಇದು. ಅಪಾರ ಮೊತ್ತದ ಬಂಡವಾಳ ಹಾಕಿ ಕಳೆದೊಂದು ವರ್ಷದಿಂದ ಇದನ್ನು ನಡೆಸುತ್ತಿದ್ದು, ಈಗ ನಗರದಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ.
ಇಲ್ಲಿ ಏರೋಬಿಕ್ಸ್, ಜುಂಬಾ, ಹಿಟ್‌ವರ್ಕ ಔಟ್, ಸ್ಪೋರ್ಟ್ಸ್ ಗೇಮ್ಸ್, ಡಾನ್ಸ್ ಮೂಲಕ ಜಿಮ್ ಕಲಿಸಲಾಗುತ್ತದೆ. ಜೂಂಬಾ  ಡಾನ್ಸ್ ಫಿಟ್ನೆಸ್ ಔಟ್‌ವರ್ಕ್  ಕೊಲಂಬಿಯಾದಿಂದ ಪರಿಚಯವಾಗಿದ್ದು, ಶಿವಮೊಗ್ಗದಂತಹ ನಗರದಲ್ಲಿ ದೊರೆಯುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಅತ್ಯಾಧುನಿಕ ತಂತ್ರಜ್ಞಾನದ ಈ ಸೌಲಭ್ಯಗಳು ನಗರದಲ್ಲಿ ಬೇರೆಲ್ಲೂ ಇಲ್ಲ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ತರಗತಿಗಳು ಇಲ್ಲಿ ನಡೆಯುತ್ತವೆ. ಬೆಳಿಗ್ಗೆ ಮತ್ತು ಸಂಜೆ ಕ್ಲಾಸ್‌ಗಳನ್ನು ರಾಜೇಶ್ ಮತ್ತು ಅವರ ಪತ್ನಿ ಕೀರ್ತಿ ತೆಗೆದುಕೊಳ್ಳುತ್ತಾರೆ, ತರಬೇತಿ ಕೊಡುತ್ತಾರೆ.
ರಾಜೇಶ್ ಮಾಚೇನಹಳ್ಳಿ ಸಮೀಪದ ಜಯಂತಿ ಗ್ರಾಮದವರು. ಭದ್ರಾವತಿಯಲ್ಲಿ ಎಸ್ಸೆಸೆಲ್ಸಿಯವರೆಗೆ ಓದಿದ ನಂತರ ಬೆಂಗಳೂರು ಸೇರಿ ಅಲ್ಲಿ ಓದು ಮುಂದುವರೆಸಿ ಬಿಡುವಿನ ವೇಳೆಯಲ್ಲಿ ಖಾಸಗಿಯಾಗಿ ಕೆಲಸ ಮಾಡುತ್ತ ಆ ದುಡಿಮೆಯಲ್ಲೇ ಜಿಮ್ ಕಲಿತವರು. ತನಗೆ ಸಿಗುತ್ತಿದ್ದ ಅಲ್ಪ ಸಂಬಳವನ್ನೂ ಜಿಮ್‌ಗೆ  ಕೊಟ್ಟು ಕಷ್ಟಪಟ್ಟು ಜೀವನ ಸಾಗಿಸಿದವರು. ಅಲ್ಲಿ ಕಲಿತು ಸಹಾಯಕ ತರಬೇತುದಾರನಾಗಿ, ತರಬೇತುದಾರನಾಗಿ ಪಡೆದ ಸುಮಾರು 15 ವರ್ಷಗಳ ಅನುಭವವನ್ನು  ಶಿವಮೊಗ್ಗದಲ್ಲಿ ಈಗ ಧಾರೆ ಎರೆಯುತ್ತಿದ್ದಾರೆ.
ಇದಕ್ಕೆ ಅವರ ಪತ್ನಿ ಕೀರ್ತಿ ಸಾಥ್ ನೀಡುತ್ತಿದ್ದಾರೆ. ಕೀರ್ತಿ ಸಹ ಉತ್ತಮ ಜಿಮ್ ತರಬೇತುದಾರರು. ಬೊಜ್ಜು ಕರಗಿಸುವುದು, ತೂಕ ಇಳಿಸಿಕೊಳ್ಳುವುದು, ದೇಹವನ್ನು ಸಮತೋಲನದಲ್ಲ್‌ಡಲು ಜಿಮ್ ಅವಶ್ಯ. ಉತ್ತಮ ಆರೋಗ್ಯವನ್ನು ಪಡೆಯಲು ಇದರಿಂದ ಸಾಧ್ಯ. ನಿಯಮಿತ ಜಿಮ್ ಮಾಡುವುದರ ಮೂಲಕ ಕಾಯಿಲೆ ರಹಿತಜೀವನವನ್ನು ನಡೆಸಬಹುದು, ಕ್ರಿಯಾಶೀಲನಾಗಿರಬಹುದು ಎನ್ನುವುದು  ಕೀರ್ತಿ ಅವರ ಅಭಿಮತ.
ಈ ಜಿಮ್ ಈಗ ಮೊದಲ ವರ್ಷದ ವಾರ್ಷಿಕೋತ್ಸವದ ಹೊಸ್ತಿಲಲ್ಲಿದೆ. ಈ ನಿಮಿತ್ತ ಅವರು ಆರೋಗ್ಯ ಜಾಗೃತಿಯನ್ನು ಸಾರ್ವಜನಿಕರಲ್ಲಿ ಮೂಡಿಸಲು ಗಾಂಧಿ ಪಾರ್ಕಿನಲ್ಲಿ ಕಾಂರ್ಕ್ರಮ ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರ್ರಾತ್ಯಕ್ಷಿಕೆಯನ್ನೂ ಏರ್ಪಡಿಸಲು ಅವರು ನಿರ್ಧರಿಸಿದ್ದಾರೆ.
 ಜನರಲ್ಲಿ ಮೊದಲು ಆರೋಗ್ಯದ ಅರಿವು ಹೆಚ್ಚಾಗಬೇಕು. ಜಿಮ್‌ನಿಂದ ಉತ್ತಮ ಆರೋಗ್ಯ ಸಾಧ್ಯ. ಇದರಿಂದ ವೈದ್ಯರನ್ನು ದೂರವಿಡಬಹುದು. ಇದೇ ಒಂದು ಆಸ್ಪತ್ರೆ ಇದ್ದಂತೆ. ಈ ಹಿನ್ನೆಲೆಯಲ್ಲಿ ದೇಹವನ್ನು ಸದೃಢವಾಗಿಸಿಕೊಳ್ಳಬೇಕು ಮತ್ತು ತಾವು ಸುಂದರ ಆಕೃತಿಯವರಾಗಬೇಕೆನ್ನುವವರು ಜಿಮ್‌ನ ಲಾಭ ಪಡೆಯಬೇಕು. ಫಿಟ್ನೆಸ್ ಪಾಯಿಂಟ್‌ನಲ್ಲಿ ಪ್ರತಿಯೊಂದು ರೀತಿಯಲ್ಲಿ ಅಂದರೆ ಡಾನ್ಸ್ ಮೂಲಕ, ಸಂಗೀತದ ಮೂಲಕ,  ವರ್ಕ್‌ಔಟ್ ಮೂಲಕ ತರಬೇತಿ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಬೊಜ್ಜು, ತೂಕದ ಸಮಸ್ಯೆ ಹೆಚ್ಚುತ್ತಿರುವುದರಿಂದ ಅವುಗಳ ನಿವಾರಣೆಗಾಗಿ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಆದರೆ ಕೆಲವೇ ದಿನಗಳಲ್ಲಿ ಇದು ಆಗುವಂತಹುದಲ್ಲ. ಸತತವಾಗಿ ಕೆಲವು ತಿಂಗಳಾದರೂ ಶ್ರಮವಹಿಸಬೇಕು. ಅಂತಹವರಿಗೆ ಇಂತಹ ಜಿಮ್ ವರದಾನ ಎನ್ನುತ್ತಾರೆ ರಾಜೇಶ್.
ಈ ಜಿಮ್‌ನಲ್ಲಿ ಪ್ರತಿ  ವರ್ಷ ಉತ್ತಮವಾಗಿ ಸಾಧನೆ ಮಾಡಿದವರನ್ನು ಮತ್ತು ಸದಸ್ಯರನ್ನು ಗುರುತಿಸಲಾಗುತ್ತದೆ. ಅವರಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಮೂಲಕ ಹೆಚ್ಚು ಜನರನ್ನು, ಯುವಕ-ಯುವತಿಯರನ್ನು ಇದು ಆಕರ್ಷಿಸುತ್ತಿದೆ. ನಗರದ ಅತ್ಯಂತ ಸುಸಜ್ಜಿತ ಜಿಮ್ ಆಗಿ ರಾಜೇಶ್ ಮಾಡಿದ್ದಾರೆ. 
..............................

No comments:

Post a Comment