Wednesday 10 January 2018

ಮಹಿಳಾ ಸಬಲೀಕರಣದ ಗುರಿಯ 
 ಕೆ.ಬಿ.ಕಾಂತಮ್ಮ

ಮಹಿಳಾ ಸಬಲೀಕರಣದಡಿ ಎಷ್ಟೋ ಅಬಲೆಯರು, ಗ್ರಾಮೀಣ ನಿರುದ್ಯೋಗಿ ಮಹಿಳೆಯರು, ಬಡ ಗೃಹಿಣಿಯರು ತಮ್ಮ ಕಾಲ ಮೇಲೆ ನಿಂತುಕೊಳ್ಳುವಂತಾಗಿದೆ. ಮಹಿಳೆಯರಿಗೆ ವಿವಿಧ ಉದ್ಯೋಗ ಮಾಡಲು ತರಬೇತಿ ಕೊಟ್ಟು, ಹಣಕಾಸು ಸಹಾಯ ನೀಡಿ  ಅವರು ಸ್ವಂತ ದುಡಿಮೆ ಮಾಡಲು ನೆರವಾಗಿದೆ. ಈ ಸಬಲೀ ಕರಣವನ್ನು ಮಹಿಳೆಯರಿಗೆ ತಲುಪಿಸು ವಲ್ಲಿ ಕೆಲವು ಯುವತಿಯರು ಮತ್ತು ಮಹಿಳೆಯರು ಮುಂದೆ ಬಂದು, ಗ್ರಾಮಗಳಿಗೆ ತೆರಳಿ, ಬಡವ ರನ್ನು ಹುಡುಕಿ, ಅವರನ್ನೆಲ್ಲ ಸಂಘಟಿಸಿ, ಸ್ವಸಹಾಯ ಸಂಘವನ್ನು ಸ್ಥಾಪಿಸಿ, ಆರ್ಥಿಕ ಸಹಾ ಯವನ್ನು ಕೊಡಿಸುವ ಕೆಲಸ ಮಾಡುತ್ತಿದ್ದಾರೆ.
ಶಿವಮೊಗ್ಗದ ಪತಂಜಲಿ  ಯುವತಿ ಮಂಡಲಿಯ ಸದಸ್ಯೆ ಕೆ. ಬಿ. ಕಾಂತಮ್ಮ ಇಂತಹ ಸುಮಾರು 25ಕ್ಕೂ ಹೆಚ್ಚು ಸ್ತ್ರೀ ಶಕ್ತಿ ಸಂಘಗಳನ್ನು ಭದ್ರಾವತಿ, ತರಿಕೆರೆ, ಕಡೂರು ಭಾಗಗಳಲ್ಲಿ ಸ್ಥಾಪಿಸಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರದ್ದು ಸಮಾಜ ಮತ್ತು ಮಹಿಳಾ ಸೇವೆ. ತಮ್ಮೆಲ್ಲ ಕೆಲಸನ್ನು ಬದಿಗೊತ್ತಿ ಇದಕ್ಕಾಗಿ ಟೊಂಕಕಟ್ಟಿದ್ದಾರೆ.  6 ವರ್ಷಗಳಿಂದ  ಸಮಾಜ ಸೇವೆ ಜೊತೆಗೆ ಆರೋಗ್ಯ, ತರಬೇತಿ, ಸಾಕ್ಷರತೆ, ರಾಷ್ಟ್ರೀಯ ಭಾವೈಕ್ಯತೆ, ಸಾಂಸ್ಕೃತಿಕ ಕಾರ್ಯಕ್ರಮ, ನೈರ್ಮಲ್ಯೀಕರಣ, ಪರಿಸರ ಜಾಗೃತಿ ಮೊದಲಾದ ಕೆಲಸ ಮಾಡುತ್ತಿದ್ದಾರೆ. ಯುವ ಮುಂದಾಳತ್ವದ ಶಿಬಿರ ನಡೆಸುವುದು, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ನೀಡುವುದು, ವ್ಯಕ್ತಿತ್ವ ವಿಕಸನ, ಸಾಮಾಜಿಕ ಅನಿಷ್ಟಗಳನ್ನು ದೂರೀಕರಿಸುವ ಬಗ್ಗೆ ಜಾಗೃತಿ ನಡೆಸುವುದು ಜೊತೆಗೆ ಜನಪದ ಕಲೆಗಳನ್ನು ಬೆಳೆಸುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.
ಸ್ವಸಹಾಯ ಸಂಘಗಳ ಮೂಲಕ ಭದ್ರಾವತಿಯ ಸಿಂಡಿಕೇಟ್ ಬ್ಯಾಂಕ್ ಮತ್ತು ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದಿಂದ ಕೋಟ್ಯಂತರ ರೂ.ಸಾಲ ಕೊಡಿಸಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸುಮಾರು 27 ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಿ ಅವರಲ್ಲಿ ಅರಣ್ಯೀಕರಣ, ಪರಿಸರ ಜಾಗೃತಿ ಮೂಡಿಸಿದ್ದಾರೆ. ಗ್ರಾಮಾಂತರದ ಮಹಿಳೆಯರಲ್ಲಿ ಇರುವ ಅರಿವಿನ ಕೊರತೆಯನ್ನು ಹೋಗಲಾಡಿಸಲು ಅಲ್ಲಿಗೆ ತೆರಳಿ ವಿವಿಧ ಯೋಜನೆಗಳ  ಬಗ್ಗೆ ತಿಳಿವಳಿಕೆ ಕೊಡುತ್ತ್ತಿದ್ದಾರೆ. ಸಮಾಜ ಸೇವೆಗಾಗಿಯೇ ತಮ್ಮನ್ನು ಮುಡುಪಾಗಿಟ್ಟಿದ್ದಾರೆ.
ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೋಡಿಹಳ್ಳಿಯವರಾದ ಇವರು, ಸದ್ಯ ಭದ್ರಾವತಿಯ ಅಶ್ವತ್ಥನಗರದಲ್ಲಿ  ವಾಸವಾಗಿದ್ದಾರೆ. ಅಲ್ಲಿಯೇ ಸುರುಚಿ ಯುವತಿ ಮಂಡಳಿಯನ್ನು ಸ್ಥಾಪಿಸಿ ಕೆಲಸ ಮಾಡುತ್ತಿದ್ದಾರೆ.  ಓದಿದ್ದು ಎಸ್‌ಎಸ್‌ಎಲ್‌ಸಿಯಾದರೂ ಮಹಿಳೆಯರ ಸ್ಥಿತಿಗತಿ ಮತ್ತು ಶ್ರೇಯೋಭಿವೃದ್ಧಿ ಬಗ್ಗೆ ಅಪಾರ ಕನಸು ಕಂಡಿದ್ದರು. ಶಿವಮೊಗ್ಗದ ಪತಂಜಲಿ ಯುವತಿ ಮಂಡಳಿ ಸೇರಿದ ನಂತರ ಇದರ ಸ್ಥಾಪಕ ಪತಂಜಲಿ ನಾಗರಾಜ್ ಅವರ ಮಾರ್ಗದರ್ಶನ ದಂತೆ ಇನ್ನಷ್ಟು ಉತ್ತಮ ಕೆಲಸ ಮಾಡಿ ಜಿಲ್ಲೆಯಲ್ಲಿ ಹೆಸರು ಸಂಪಾದಿಸಿದ್ದಾರೆ.  ಇವರ ಇಂತಹ ಮಹತ್ಕಾರ್ಯವನ್ನು ಗಮನಿಸಿ ಜಿಲ್ಲಾ ಯುವ ಪ್ರಶಸ್ತಿ ನೀಡಲಾಗಿದೆ.
ಎಲ್ಲೇ ಆಗಲಿ ಮಹಿಳೆ ತೊಂದರೆ ಅನುಭವಿಸು ತ್ತಿರುವ ಬಗ್ಗೆ ಮಾಹಿತಿ ದೊರೆತರೆ ಅಲ್ಲಿಗೆ ಧಾವಿಸಿ ಅವರ ನೆರವಿಗೆ ಕಂಕಣಬದ್ಧರಾಗುತ್ತಾರೆ. ಗ್ರಾಮ ಗಳಲ್ಲಿ ವಿವಿಧ ವಿಚಾರ ಸಂಕಿರಣ, ಕಾರ್ಯಾಗಾರ ಗಳನ್ನು ನಡೆಸಿ ಅವರಲ್ಲಿ ಜಾಗೃತಿ ಮೂಡಿಸುತ್ತಿ ದ್ದಾರೆ. ಇವರ ಕೆಲಸ ಗಮನಿಸಿ ರಾಜ್ಯಮಟ್ಟದ ಕನಕ ಕಥ ಕೀರ್ತನಾ ಮಹೋತ್ಸವದಲ್ಲಿ  ಸನ್ಮಾನಿಸಲಾ ಗಿದೆ.  ಈ ವರ್ಷ ನಡೆದ ರಾಷ್ಟ್ರೀಯ ಯುವ ದಿನ ಆಚರಣೆಯಲ್ಲಿ ಜಿಲ್ಲಾಡಳಿತ ಗೌರವಿಸಿದೆ. ತಾಲೂಕು ಯುವ ಸಮಾವೇಶ ಸೇರಿದಂತೆ ಸುಮಾರು ಹತ್ತಕ್ಕೂ ವಿವಿಧ ಸಂಘಟನೆಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿವೆ.
ಪತಂಜಲಿ ಸಂಸ್ಥೆಯು ತನ್ನನ್ನು ಈ ಮಟ್ಟಕ್ಕೆ ತಂದಿದೆ. ಸಂಸ್ಥೆಯ ಮಾರ್ಗದರ್ಶನದಂತೆ ಕೆಲಸ ಮಾಡುತ್ತಿದ್ದೇನೆ. ಇದರಲ್ಲಿ ತನ್ನದೇನೂ ಹೆಚ್ಚು ಗಾರಿಕೆ ಇಲ್ಲ. ಪತಿಯ ಸಹಕಾರವೂ ಇದೆ. ಯಾವ ಪ್ರಚಾರವನ್ನೂ, ಸ್ವಹಿತವನ್ನೂ ಬಯಸಿಲ್ಲ. ಮಹಿಳೆಯರ ಬವಣೆ ಗಮನಿಸಿ ಏನಾದರೂ ಸಹಾಯ ಮಾಡಬೇಕೆಂಬ ಕನಸಿನಿಂದ ಬಂದಿದ್ದೇನೆ. ಆ ಪ್ರಕಾರ ಕೆಲಸ ಮಾಡುತ್ತಿದ್ದೇನೆ ಸೇವೆಯೇ ತನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ ಎಂದು ಮನದುಂಬಿ ನುಡಿಯುತ್ತಾರೆ ಕಾಂತಮ್ಮ.
.............................

No comments:

Post a Comment