Tuesday 16 January 2018

ಸ್ಟುಡೆಂಟ್ ಒಲಿಂಪಿಕ್ಸ್ ಸಾಧಕ
ರಂಜಿತ್‌ಮೂರ್ತಿ 

ಒಂದು  ದೇಶದ ಹಿರಿಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯಲು ಸಾಧ್ಯವಿರುವ ಕೆಲವೇ ಸಂಗತಿಗಳಲ್ಲಿ ಕ್ರೀಡೆಯೂ ಒಂದು. ಆದರೆ ಸರ್ಕಾರಗಳು ಅದನ್ನು ನಮ್ಮಲ್ಲಿ ಕಡೆಗಣಿಸಿವೆ.ಇದರಿದಂಆಗಿ ಎಷ್ಟೋ ಪ್ರತಿಭಾನ್ವಿತ ಕ್ರೀಡಾಪಟುಗಳು ಬೆಳಕಿಗೆ ಬಾರದೆ ಜಿಲ್ಲಾ ಮಟ್ಟದಲ್ಲೇ ತಮ್ಮ ಸಾಧನೆ ಅಂತ್ಯಗೊಳಿಸುವಂತಾಗಿದೆ. ಆಸಕ್ತ ಕ್ರೀಡಾಪಟುಗಳಿಗೆ ತರಬೇತಿ, ಇತರೇ ಸೌಕರ್ಯ ಸಿಗದೆ ಅವರು ನರಳುವಂತಾಗಿದೆ. ಇಂತಹ ವ್ಯವಸ್ಥೆಯ ಮಧ್ಯೆಯೂ ಅಲ್ಲೊಂದು, ಇಲ್ಲೊಂದು ಕ್ರೀಡಾ ಪ್ರತಿಭೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತ್ತಿದೆ. ಅಂತಹವರಲ್ಲಿ ನಗರದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅಂತಿಮ ವರ್ಷದ ಬಿಬಿಎಂ ವಿದ್ಯಾರ್ಥಿ ರಂಜಿತ್‌ಮೂರ್ತಿ ಒಬ್ಬರು.
ರಂಜಿತ್ ಅಂತಾರಾಷ್ಟ್ರೀಯ ಸ್ಟುಡೆಂಟ್ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಇತ್ತೀಚೆಗ ವಡೋದರಾದಲ್ಲಿ ನಡೆದ ರಾಷ್ಟೀಯ ಚಾಂಪಿಯನ್‌ಶಿಪ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಧರಿಸುವುದರೊಂದಿಗೆ ಆಯ್ಕೆಯಾಗಿರುವ ಇವರು, 4* 1000 ಮೀಟರ್ ರಿಲೇ ಮತ್ತು ಟ್ರಿಪಲ್ ಜಂಪ್‌ನಲ್ಲಿ ಆಯ್ಕೆಯಾಗಿದ್ದಾರೆ, ಫೆಬ್ರುವರಿ ಅಂತ್ಯದಲ್ಲಿ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್ ಮಲೇಶಿಯಾದಲ್ಲಿ ನಡೆಯಲಿದೆ. 
 ಡಿವಿಎಸ್ ಸ್ವತಂತ್ರ  ಪಿಯು ಕಾಲೇಜಿನಲ್ಲಿ ಓದುವಾಗ ವಿಶೇಷವಾಗಿ ಕ್ರೀಡೆಯತ್ತ ಸೆಳೆಯಲ್ಪಟ್ಟ ರಂಜಿತ್, ಅಲ್ಲಿಯವರೆಗೆ ಅಷ್ಟೊಂದು ಆದ್ಯತೆಯನ್ನು ಕ್ರೀಡೆಗೆ ಕೊಟ್ಟಿರಲಿಲ್ಲ. ಪಿಯುನಲ್ಲಿ ಅಂತರ್ ಕಾಲೇಜು ಕೂಟದಲ್ಲಿ ಪಾಲ್ಗೊಂಡಾಗಲೇ ಅವರಿಗೆ ತನ್ನ ಪ್ರತಿಭೆಯ ಅರಿವಾದದ್ದು. ಅಲ್ಲಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲೂ ಭಾಗವಹಿಸುವ ಅವಕಾಶ ಪಡೆದುಕೊಂಡು, ಜಯದ ಪದಕ ಧರಿಸಿಯೇ ಮರಳಿದಿದ್ದಾರೆ. ಗದಗ, ದಾವಣಗೆರೆ ಮತ್ತು ಧಾರವಾಡದಲ್ಲಿ ನಡೆದ  ಕ್ರೀಡಾಕೂಟದಲ್ಲಿ ಕಾಲೇಜಿಗೆ ಯಶಸ್ಸನ್ನು ತಂದುಕೊಟ್ಟ ಕೀರ್ತಿ ಇವರದ್ದು.
ಪಿಯು ನಂತರ ಸ್ಟುಡೆಂಟ್ ಒಲಿಂಪಿಕ್ಸ್ ಬಗ್ಗೆ ಮಾಹಿತಿ ಪಡೆದುಕೊಂಡು ಅದಕ್ಕಾಗಿ ವಿಶೇಷ ತರಬೇತಿಯನ್ನು ಮುಂದುವರೆಸಿದರು. ನಗರದ ನೆಹರೂ ಕ್ರೀಡಾಂಗಣದಲ್ಲಿ ಈ ಮೊದಲೇ ಕ್ರೀಡಾ ತರಬೇತಿಯನ್ನು ಉದಯಕುಮಾರ್ ಅವರಿಂದ ಪಡೆಯುತ್ತಿದ್ದರೂ ಒಲಿಂಪಿಕ್ಸ್‌ಗೆ ಇನ್ನಷ್ಟು ತಯಾರಿ ನಡೆಸಿದರು. ಇದರ ಪರಿಣಾಮ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. 
ರಂಜಿತ್ ತಂದೆ ಕೃಷ್ಣಮೂರ್ತಿ ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಗನ ಸಾಧನೆಗೆ ತಂದೆ-ತಾಯಿ ತಮ್ಮೆಲ್ಲ ಸಹಕಾರ, ಸಹಾಯ ನೀಡುತ್ತಿದ್ದಾರೆ. ತಮ್ಮ ಕುಟುಂಬದಲ್ಲಿ ಯಾರೂ ಮಾಡದ ಸಾಧನೆಯನ್ನು ಮಾಡುತ್ತಿರುವ ಬಗ್ಗೆ, ಉತ್ತಮ ಸಾಧನೆ ಮಾಡುವ  ಮೂಲಕ ಕುಟುಂಬಕ್ಕೆ ಹೆಸರು ತಂದುಕೊಟ್ಟ ಬಗ್ಗೆ ಅಪರಿಮಿತ ಸಂತೋಷ ಅವರಲ್ಲಿದೆ. ರಾಜ್ಯ ಸರಕಾರ ಇಂತಹ ಯುವ ಕ್ರೀಡಾಪಟುಗಳನ್ನು ಇನ್ನಷ್ಟು ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ. ಪ್ರತಿಭೆಗೆ ತಕ್ಕ ನೀರೆರೆದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾದ್ಯವಾಗುತ್ತದೆ ಎನ್ನುತ್ತಾರೆ ಕೃಷ್ಣಮೂರ್ತಿ. 
ತನ್ನ 5 ವರ್ಷದ ತರಬೇತಿ ಈಗ ಫಲ ಕೊಟ್ಟಿದೆ. ಸಾಧನೆ ಮಾಡುತ್ತ ಹೋದರೆ ಯಾವುದೂ ಅಸಾಧ್ಯವಲ್ಲ. ಕಿರಿಯ ವಯಸ್ಸಿನಲ್ಲೇ ಇದಕ್ಕೆ ಛಲ ತೊಡಬೇಕು. ಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಮಿಂಚಲು ಸಾಧ್ಯ, ಇದಕ್ಕೆ ಕನಿಷ್ಠ ಹತ್ತಾರು ವರ್ಷ ತಪಸ್ಸಿನ ರೀತಿ ಕಠಿಣ ತರಬೇತಿ ಅವಶ್ಯ. ಗೆಲುವಿಗೆ ತಕ್ಕಂತೆ ಕ್ರೀಡಾಪಟುಗಳನ್ನು ರೂಪಿಸಬಲ್ಲವರು ನಾವಾಗಿಲ್ಲ. ನಮ್ಮ ದೇಶದಲ್ಲಿ ಎಷ್ಟೋ ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಅವರಿಗೆ ಬೇಕಾದ ತರಬೇತಿ, ಅಗತ್ಯ ಕ್ರೀಡೋಪಕರಣಗಳ ಸವಲತ್ತೂ ಇಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಆಧುನಿಕ ತರಬೇತಿ ನಮ್ಮಲ್ಲಿಯೂ ಸಿಗುತ್ತಿದೆ ಎನ್ನುತ್ತಾರೆ ರಂಜಿತ್
ಬಿಡುವು ಸಿಕ್ಕಾಗ ಕ್ರೀಡೆ ಎಂಬ ಮನೋಭಾವ ಇಂದಿನ ಯುವಕರಲ್ಲಿದೆ. ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿ ತನ್ನನ್ನು  ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಆತನಲ್ಲಿ ಸಾಧನೆಯ ಸಾಮರ್ಥ್ಯ ಬರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಇದಕ್ಕೆ ರಂಜಿತ್ ಒಂದು ಉದಾಹರಣೆ.
18.2.17
....................................



No comments:

Post a Comment