Saturday 6 January 2018

ಭರವಸೆಯ ಪವರ್‌ಲಿಫ್ಟರ್ 
ತೀರ್ಥೇಶ್


........................
ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಸಾಧನೆಯನ್ನು ಮಾಡುವವರು ಹಲವರಿದ್ದಾರೆ.  ಬಡತನದಿಂದಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಲು ತಂದೆ ತಾಯಿಗೆ ಸಾಧ್ಯವಾಗದಿದ್ದರೂ, ಮಕ್ಕಳೇ ಹೇಗೋ ಕಷ್ಟಪಟ್ಟು ಓದಿಸುವ ಛಲವನ್ನು ಸಾಕಷ್ಟು ಸಂದರ್ಗಳಲ್ಲಿ ಬೆಳೆಸಿಕೊಂಡಿರುತ್ತಾರೆ. ಇದೇ ವೇಳೆ ಸಾಧನೆಗೂ ಕೈಹಾಕುತ್ತಾರೆ. ಅದರಲ್ಲಿ ಯಶಸ್ಸನ್ನೂ ಕಂಡು ಆಶ್ಚರ್ಯಪಡುವಂತೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಾರೆ. ಇಂತಹ ಸಾಧಕ ವಿದ್ಯಾರ್ಥಿಯೊಬ್ಬ ನಗರದಲ್ಲಿದ್ದಾನೆ. ಅವನೇ ತೀರ್ಥೇಶ್.
ತೀರ್ಥೇಶ್ ತೀರ ಅಪರಿಚಿತನಲ್ಲ. ಬಹುತೇಕ ಜನರಿಗೆ ಈತನ ಸಾದನೆ ಗೊತ್ತಿದೆ. ಪವರ್ ಲಿಫ್ಟಿಂಗ್, ಬಾಡಿ ಬಿಲ್ಡಿಂಗ್ ಮತ್ತು ವೇಟ್ ಲಿಫ್ಟಿಂಗ್ ಈ ಮೂರೂ ಕ್ಷೇತ್ರದಲ್ಲೂ ವಿಶೇಷ ಸಾಧನೆ ಮಢುತ್ತಿದ್ದಾನೆ. ಈತ ಪಡೆದಿರುವ ಚಿನ್ನ, ಬೆಳ್ಳಿ, ಕಂಚಿನ ಪದಕಗಳ ಸಾಲುಸಾಲೇ ಈತನ ಸಾಧನೆಯನ್ನು ಹೇಳುತ್ತವೆ. ಈತನಿಗೆ ಕಲಿಕೆಗೆ ಪ್ರೋತ್ಸಾಹ ನೀಡಿದವರು ಗೆಳೆಯಂದಿರು. ಮೂಲತಃ ಕಡೂರು ತಾಲೂಕು ಮರಡಿಹಳ್ಳಿಯವಾನದ ತೀರ್ಥೇಶ್ ಪ್ರಾಥಮಿಕ ಮತ್ತು ಜೂನಿಯರ್ ಕಾಲೇಜನ್ನು ಗ್ರಾಮದಲ್ಲಿಯೇ ಓದಿದವನು. ನಂತರ ಬಡ ಕೃಷಿ ಕಾರ್ಮಿಕರಾದ ತಂದೆ ಕೃಷ್ಣಮೂರ್ತಿ ಓದಿಸಲುು ಸಾಧ್ಯವಾಗದೆ ಕೈ ಚೆಲ್ಲಿದಾಗ ಸ್ವತಃ ತೀರ್ಥೇಶ್ ಹೇಗೊ ಶಿವಮೊಗ್ಗಕ್ಕೆ ಬಂದು ಸಹ್ಯಾದ್ರಿ ಕಾಲೇಜಿನಲ್ಲಿ ಓದು ಆರಂಭಿಸಿದ. ಸದ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದು ಮುಂದುವರೆಸಿದ್ದಾನೆ. 5 ವರ್ಷಗಳಿಂದ ಪುಲಿಕೇಶಿ ಮಲ್ಟಿಜಿಮ್‌ನಲ್ಲಿ ತರಬೇತಿ ಪಡೆಯುತ್ತಲೇ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಪ್ರತಿದಿನ ಸಂಜೆ 3 ಗಂಟೆ ಮತ್ತು ಬೆಳಿಇಗ್ಗೆ 1 ಗಂಟೆ ಜಿಮ್‌ಗೆ ಹೊಗುವ ಈತ ವರ್ಷಕ್ಕೆ ಹತ್ತಾರು ಚಾಂಪಿಯನ್ ಶಿಪ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಜೊತೆಗೆ ಪದಕವನ್ನೂ ತನ್ನೊಂದಿಗೆ ತರುತ್ತಿದ್ದಾನೆ. ಆದರೆ ಈತನಿಗಿರುವ ಸಮಸ್ಯೆ ಎಂದರೆ ಹಣ ಹೊಂದಿಸುವುದು. ವಿದ್ಯಾರ್ಥಿಯಾಗಿರುವುದರಿಂದ ರಾಜ್ಯ ಮತ್ತು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಿಗೆ ತೆರಳಲು ಹಣದ ಅವಶ್ಯಕತೆ ಹೆಚ್ಚಿರುತ್ತದೆ.
ಈ ಸಮಸ್ಯೆಯಿಂದಲೇ ಎಷ್ಟೋ ಸ್ಪರ್ಧೆಗಳಿಂದ ವಂಚಿತನಾಗಿದ್ದನ್ನು ಬೇಸರದಿಂದ ಹೇಳಿಕೊಳ್ಳುತ್ತಾನೆ. ಆದರೂ ಕೆಲವು ಸಂದರ್ಭಗಳಲ್ಲಿ ದಾನಿಗಳು ಸಹಕರಿಸಿದ್ದನ್ನು ಸ್ಮರಿಸುತ್ತ್ತಾನೆ.
ಜೂನ್ 7ರಿಂದ 12ರವರೆಗೆ ಉದಯಪುರದಲ್ಲಿ ಏಶಿಯನ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಡೆಯಲಿದ್ದು., ಅದಕ್ಕೆ ಲಕ್ಷಾಂತರ ರೂ. ಬೇಕಿದೆ. ಆದರೆ ಈ ಪ್ರತಿಭಾವಂತನಿಗೆ ಈಗ ಹನದ ಸಮಸ್ಯೆ ಎದುರಾಗಿದೆ. ಯಾರಾದರೂ ಸಹಾಯ ಮಾಡಿದರೆ ಮಾತ್ರ ಪಾಲ್ಗೊಳ್ಳಲು ಸಾಧ್ಯ ಎನ್ನುತ್ತಾನೆ ತೀರ್ಥೇಶ್. 2013ರಿಂದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವ ಈತನಿಗೆ ಕರ್ನಾಟಕದ ಬಲಿಷ್ಠ ವ್ಯಕ್ತ್ತಿ ಎಂಬ ಬಿರುದನ್ನು ದಾವಣಗೆರೆಯಲ್ಲಿ ನಡೆದ ಸ್ಪರ್ಧೆಯಲ್ಲಿ ನೀಡಲಾಗಿದೆ. ಕುಂದಾಪುರ, ಭದ್ರಾವತಿ ಮತ್ತು ಮಂಗಳೂರಿನಲ್ಲಿ ನಡೆದ ಪವರ್ ಲಿಫ್ಟಿಂಗ್‌ನಲ್ಲಿಯೂ ಪಾಲ್ಗೊಂಡು ಪದಕ ಧರಿಸಿ ಬಂದಿದ್ದಾನೆ.  ಕೊಯಮತ್ತೂರಿನಲ್ಲಿ ನಡೆದ ಸ್ಪರ್ಧೆಯಲ್ಲೂ ಚಿನ್ನದ ಪದಕ ದಕ್ಕಿದೆ. ಇಂಡಿಯನ್ ಪವರ್‌ಲಿಫ್ಟಿಂಗ್ ಅಸೋಸಿಯೇಶನ್‌ನವರು ನಡೆಸಿದ  ಸ್ಪರ್ಧೆಯಲ್ಲಿ ಚಿನ್ನದ ಪದಕ ಈತನ ಪಾಲಾಗಿದೆ. ಈತನ ಸಾಧನೆಯನ್ನು ಗಮನಿಸಿ ಪತಂಜಲಿ ಸಂಸ್ಥೆಯವರು ಪತಂಜಲಿ ರತ್ನ ಪ್ರಶಸ್ತಿ ನೀಡಿದ್ದಾರೆ. ಶಿವಮೊಗ್ಗ ದಸರಾದಲ್ಲಿ, ಗಣರಾಜ್ಯೋತ್ಸವದಲ್ಲಿ ಗೌರವಿಸಲಾಗಿದೆ. ಇತ್ತೀಚೆಗೆ ಸರ್ಕಾರಿ ಕಾಲೇಜಿನ ವತಿಯಿಂದಲೂ ಸನ್ಮಾನಿಸಲಾಗಿದೆ. 
ಬಡಿ ಬಿಲ್ಡಿಂಗ್‌ನಲ್ಲೂ ಸಾಕಷ್ಟು ಪ್ರಶಸ್ತಿ ಬಾಚಿರುವ ತೀರ್ಥೇಶ್, ಕೊಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಸಾಧನೆ ಮಾಡಿ ನಗದು ಹಣದೊಂದಿಗೆ ಪ್ರಶಸ್ತಿ ಗಳಿಸಿದ್ದಾನೆ. ಈತನ ಸಹೊದರ ಹುಟ್ಟೂರಲ್ಲಿ ವ್ಯಾಯಾಮ ಶಾಲೆಗೆ ಹೋಗಿ ಉತ್ತಮ ಮೈಕಟ್ಟು, ಆರೋಗ್ಯವನ್ನು ಬೆಳೆಸಿಕೊಂಡಿರುವುದನ್ನು ಗಮನಿಸಿ, ಆತನಂತೆ ತಾನೂ ಸಹ ಏಕೆ ಆಗಬಾರದೆಂಬ ಛಲ ತೊಟ್ಟು ಶಿವಮೊಗ್ಗಕ್ಕ ಬಂದು, ಹಾಸ್ಟೆಲ್‌ನಲ್ಲಿ ಉಳಿದು, ಇಲ್ಲಿಯೂ ಸಾಧನೆ ಮಾಡುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾನೆ.   
ಈತನಿಗೆ ಆರ್ಥಿಕ ನೆರವಿನ ಅವಶ್ಯಕತೆ ಇದ್ದು, ಧನವಂತರು, ಸಹೃದಯಿಗಳು ನೆರವಾಗಬೇಕಿದೆ. ಆ ಮೂಲಕ ಈತನ ಪ್ರತಿಭೆ ದೇಶ, ವಿದೇಶದಲ್ಲಿ ಮಿಂಚುವ ಮೂಲಕ ನಗರಕ್ಕೆ ಹೆಸರು ತರಲು ಸಹಕರಿಸಬೇಕಿದೆ.
..............

No comments:

Post a Comment