Saturday 13 January 2018

’ಕಫ’ ತೆಗೆಯುವುದರಲ್ಲಿ ನಿಪುಣ 
ಶಿವಮೊಗ್ಗದ ವೈಜನಾಥ

ಶಿವಮೊಗ್ಗ, ನ. 21: ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿ, ಪರಿಸರ ಮಾಲಿನ್ಯ, ಧೂಳು, ಹವಮಾನ ವೈಪರೀತ್ಯ ಮತ್ತೀತರ ಕಾರಣಗಳಿಂದ ವಯೋಭೇದವಿಲ್ಲದೆ ’ಕಫ’, ’ಶೀತ’, ’ಕೆಮ್ಮು’, ’ತಲೆಭಾರ’, ’ಅಸ್ತಮಾ’, ’ಡಸ್ಟ್ ಅಲರ್ಜಿ’, ’ಕಿವಿ ಸೋರುವಿಕೆ’, ’ಫೈಲ್ಸ್’ದಂತಹ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಲವರಿಗೆ ಈ ಸಮಸ್ಯೆಗಳು ಜೀವನಾದ್ಯಂತ ಬೆಂಬಿಡದೆ ಕಂಗೆಡಿಸಿರುತ್ತವೆ.
ಆಸ್ಪತ್ರೆ, ವೈದ್ಯರ ಬಳಿ ಎಡತಾಕಿದರೂ ಕೆಲವರಿಗೆ ಈ ಮೇಲ್ಕಂಡ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಕ್ಕಿರುವುದಿಲ್ಲ. ಆದರೆ ಈ ರೋಗ ಗುಣಪಡಿಸುವುದರಲ್ಲಿ ಶಿವಮೊಗ್ಗದ ಖ್ಯಾತ ಯೋಗಪಟು ವೈಜನಾಥರವರು ಸಿದ್ದಹಸ್ತರಾಗಿದ್ದಾರೆ!
ಯಾವುದೇ ಮಾತ್ರೆ - ಔಷಧ ಬಳಸದೆ, ಕಳೆದ ಹಲವು ವರ್ಷಗಳಿಂದ ಈ ಬಾಧೆಗಳಿಂದ ಬಳಲುತ್ತಿದ್ದ ನೂರಾರು ಜನರನ್ನು ಗುಣಪಡಿಸಿದ್ದಾರೆ. ಅದರಲ್ಲಿಯೂ ’ಕಫ’ ತೆಗೆಯುವುದರಲ್ಲಿ ಇವರು ಎತ್ತಿದ ಕೈ. ಈ ಹಿನ್ನೆಲೆಯಲ್ಲಿಯೇ ಇವರು ಜನಮಾನಸದಲ್ಲಿ ’ಕಫ ಯೋಗಿ’ ಎಂದೇ ಪ್ರಸಿದ್ದಿ ಸಂಪಾದಿಸಿದ್ದಾರೆ.
ಯಾರೀವರು?: ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿವೃತ್ತ ನೌಕರ ವೈಜನಾಥರವರು ಮೂಲತಃ ವಿಜಾಪುರದವರು. ಪ್ರಸ್ತುತ ಶಿವಮೊಗ್ಗ ನಗರದ ವೆಂಕಟೇಶನಗರ 3 ನೇ ತಿರುವಿನಲ್ಲಿ ವಾಸಿಸುತ್ತಿದ್ದಾರೆ. ಯೋಗದಲ್ಲಿ ಅಪಾರ ಸಾಧನೆ ಮಾಡಿರುವ ಇವರು, ಈಗಾಗಲೇ ಸಾವಿರಾರು ಜನರಿಗೆ ಯೋಗ ಹೇಳಿಕೊಟ್ಟಿದ್ದಾರೆ. ಇದರ ಮೂಲಕವೇ ಹಲವು ರೋಗಗಳನ್ನು ಗುಣಪಡಿಸಿರುವುದು ಇವರ ಹೆಗ್ಗಳಿಕೆಯಾಗಿದೆ.
ಹಾಗೆಯೇ ಪುರುಷರು, ಮಹಿಳೆಯರು ಸೇರಿದಂತೆ ವಯೋಬೇಧವಿಲ್ಲದೆ ಸಾವಿರಾರು ಜನರಿಗೆ ಈಜು ಕೂಡ ಕಲಿಸಿದ್ದಾರೆ. 68 ರ ವಯೋಮಾನದಲ್ಲಿಯೂ ಕ್ರಿಯಾಶೀಲರಾಗಿರುವ ಇವರು ಇಂದಿಗೂ ಕೂಡ ಯೋಗ, ಈಜು ಹೇಳಿಕೊಡುತ್ತಾರೆ. ಇದರ ಜೊತೆಗೆ ’ಕಫ’ ತೆಗೆಯುವ ಕೆಲಸ ಕೂಡ ಮಾಡುತ್ತಾರೆ.
ಕಫ ತೆಗೆಯುವಿಕೆ: ಯಾವುದೇ ಔಷಧ ಬಳಸದೆ ತಮ್ಮದೆ ಆದ ವಿಧಾನದ ಮೂಲಕ ವೈಜನಾಥರವರು ದೇಹದೊಳಗೆ ಕಟ್ಟಿಕೊಂಡಿರುವ ’ಕಫ’ ತೆಗೆಯುತ್ತಾರೆ. ಈಗಾಗಲೇ ನಾನಾ ವರ್ಗದ ನೂರಾರು ಜನರಿಗೆ ಯಶಸ್ವಿಯಾಗಿ ’ಕಫ’ ತೆಗೆದಿದ್ದಾರೆ. ಈ ಮೂಲಕ ’ಶೀತ’, ’ಕೆಮ್ಮು’, ’ತಲೆಭಾರ’ದಂತಹ ಸಮಸ್ಯೆಗಳನ್ನು ಗುಣಪಡಿಸಿದ್ದಾರೆ.
’ಮುಂಜಾನೆಯ ಸಮಯದಲ್ಲಿ ಕಫ ತೆಗೆಯುವ ಕೆಲಸ ಮಾಡುತ್ತೆನೆ. ಕಫ ತೆಗೆಸಿಕೊಳ್ಳಲು ತಮ್ಮ ಬಳಿ ಆಗಮಿಸುವವರು ಹಿಂದಿನ ದಿನ ರಾತ್ರಿ ಉಪವಾಸವಿದ್ದರೆ ಸಾಕಷ್ಟು ಅನುಕೂಲವಾಗಲಿದೆ. ಕಫ ತೆಗೆಯುವ ವೇಳೆ ದೇಹ ಬಿಗಿ ಹಿಡಿಯಬಾರದು. 15 ರಿಂದ 20 ನಿಮಿಷದಲ್ಲಿ ಕಫ ತೆಗೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೆನೆ.
ಕಫ ತೆಗೆಯುವ ವೇಳೆ ಕೆಲವರು ತಮ್ಮ ಮೈಮೇಲೆಯೇ ವಾಂತಿ ಮಾಡುತ್ತಾರೆ. ಉಗುಳು, ಕಫ ಸಿಡಿಸುತ್ತಾರೆ. ಇದಕ್ಕೆ ಅಸಹ್ಯ ಪಟ್ಟುಕೊಳ್ಳುವುದಿಲ್ಲ. ಅತ್ಯಂತ ಸಂತಸದಿಂದಲೇ ತಮ್ಮ ಕೆಲಸ ಮಾಡುತ್ತೆನೆ. ತನ್ನ ಬಳಿ ಆಗಮಿಸುವವರು ಸಮಸ್ಯೆಯಿಂದ ಮುಕ್ತರಾಗಬೇಕು ಎಂಬುವುದು ತಮ್ಮ ಕಳಕಳಿಯಾಗಿದೆ’ ಎಂದು ವೈಜನಾಥರವರು ಹೇಳುತ್ತಾರೆ.
ಗುಣಪಡಿಸುತ್ತೆನೆ: ’ಕಫ ತೆಗೆಯುವುದರ ಜೊತೆಗೆ ಶೀತ, ಕೆಮ್ಮು, ಅಸ್ತಮಾ, ಡಸ್ಟ್ ಅಲರ್ಜಿ, ಕಿವಿ ಸೋರುವಿಕೆ, ಫೈಲ್ಸ್‌ನಂತಹ ಅನಾರೋಗ್ಯ ಸಂಬಂಧಿತ ಬಾಧೆಗಳಿಗೂ ಯೋಗ ಸೇರಿದಂತೆ ತಮ್ಮದೆ ಆದ ವಿಧಾನಗಳ ಮೂಲಕ ಗುಣಪಡಿಸುತ್ತೆನೆ. ಈ ಸೇವೆಗಳಿಗೆ ಯಾರ ಬಳಿಯೂ ಇಂತಿಷ್ಟೆ ಹಣ ಕೊಡಿ ಎಂದು ಕೇಳುವುದಿಲ್ಲ. ಅವರು ಕೊಟ್ಟಷ್ಟು ಪಡೆಯುತ್ತೆನೆ. ಇಲ್ಲದಿದ್ದರೆ ಇಲ್ಲ. ನೂರಾರು ಜನರಿಗೆ ಉಚಿತವಾಗಿ ಸೇವೆ ನೀಡಿದ್ದೆನೆ.
ಶಿವಮೊಗ್ಗ ಮಾತ್ರವಲ್ಲದೆ ಜಿಲ್ಲೆಯ ಇತರೆ ತಾಲೂಕು ನೆರೆಹೊರೆ ಜಿಲ್ಲೆಯಿಂದಲೂ ಕಫ ತೆಗೆಸಿಕೊಳ್ಳಲು ತಮ್ಮ ಬಳಿ ಜನರು ಆಗಮಿಸುತ್ತಾರೆ. ಆರೋಗ್ಯವೇ ಸಂಪತ್ತಾಗಿದೆ. ಪ್ರತಿಯೋರ್ವರು ಆರೋಗ್ಯ ಕಾಪಾಡಿಕೊಳ್ಳುವುದರತ್ತ ಗಮನಹರಿಸಬೇಕು. ಎಲ್ಲ ರೋಗಕ್ಕೂ ಯೋಗವೇ ಮದ್ದಾಗಿದೆ’ ಎಂದು ವೈಜನಾಥರವರು ತಿಳಿಸುತ್ತಾರೆ.
ಎಲ್ಲಿ ಸಿಗುತ್ತಾರೆ?: ’ವೆಂಕಟೇಶನಗರದ ಬಳಿಯಿರುವ ಬಸವಕೇಂದ್ರದ ಬಳಿ ತಮ್ಮನ್ನು ಭೇಟಿಯಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ದೂರವಾಣಿ ಸಂಖ್ಯೆ : 98449-26375 ಗೆ ಸಂಪರ್ಕಿಸಬಹುದಾಗಿದೆ’ ಎಂದು ವೈಜನಾಥರವರು ನಾಗರೀಕರಿಗೆ ತಿಳಿಸಿದ್ದಾರೆ.

26,11,2016

------------------------------------

No comments:

Post a Comment